
ಅತಿಯಾಗಿ ತಿನ್ನುವುದು, ವ್ಯಾಯಮದ ಕೊರತೆ, ಆಲ್ಕೋಹಾಲ್ ಸೇವನೆ ಸರಿಯಾಗಿ ನಿದ್ರೆ ಮಾಡದೆ ಇರುವವರಲ್ಲಿ ಹೆಚ್ಚಾಗಿ ಹೊಟ್ಟೆಯ ಸುತ್ತಲು ಕೊಬ್ಬು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಸುತ್ತಲು ಕೊಬ್ಬು ಕಾಣಿಸಿಕೊಂಡರೆ ಹೊಟ್ಟೆ ಕೂಡ ದೊಡ್ಡದಾಗುತ್ತಾ ಹೋಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಎಷ್ಟೇ ವ್ಯಾಯಾಮ ಮಾಡಿದರೂ ಇದನ್ನು ಕರಗಿಸಲು ಆಗುವುದಿಲ್ಲ. ಹೊಟ್ಟೆಯ ಸುತ್ತಲು ಕಾಣಿಸಿಕೊಳ್ಳುವಂತಹ ಕೊಬ್ಬು ದೇಹದ ಒಳಗಿನ ಅಂಗಾಂಗಗಳನ್ನು ಆವರಿಸುತ್ತದೆ.
ಇದು ಅಂಗಾಂಗಗಳಿಗೆ ತುಂಬಾ ಅಪಾಯಕಾರಿ ಇಷ್ಟು ಮಾತ್ರವಲ್ಲದೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚುಸುವುದರಿಂದ ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೊಟ್ಟೆಯ ಕೊಬ್ಬನ್ನು ಕರಗಿಸಲು ಕೇವಲ ವ್ಯಾಯಾಮ ಮಾಡಿದರೆ ಸಾಲದು.ಯಾಕೆಂದರೆ ಈ ಕೊಬ್ಬು ಯಾವ ಕಾರಣಗಳಿಂದಾಗಿ ಬಂದಿದೆ ಎಂದು ಮೊದಲು ತಿಳಿದುಕೊಳ್ಳಬೇಕು.
ಸಮಸ್ಯೆಯ ಮೂಲ ತಿಳಿದರೆ ಅದಕ್ಕೆ ಹೊಂದಿಕೊಂಡು ವ್ಯಾಯಮ ಮಾಡಿ ಕೊಬ್ಬನ್ನು ಕರಗಿಸಬಹುದು. ಯಾವುದೇ ವ್ಯಾಯಾಮ ಅಥವಾ ಔಷಧಿಯನ್ನು ಆರಂಭಿಸುವ ಮೊದಲು ಕೊಬ್ಬು ಬರಲು ಸಾಮಾನ್ಯವಾಗಿರುವ 8 ಕಾರಣಗಳನ್ನು ತಿಳಿದುಕೊಳ್ಳಿ.
ದಿನವಿಡಿ ಕುಳಿತಿರುವುದು
ದೀರ್ಘ ಕಾಲದವರೆಗೆ ಕುಳಿತುಕೊಂಡಿದ್ದರೆ ಆಗ ಕೊಬ್ಬನ್ನು ಕರಗಿಸುವಂತಹ ಕಿಣ್ವಗಳು, ಲಿಪೊಪ್ರೋಟೀನ್ ಲಿಪ್ಸೆ ತಮ್ಮ ಚಟುವಟಿಕೆಯನ್ನು ಕಡಿಮೆ ಮಾಡುವುದು. ಇದರಿಂದ ಹೊಟ್ಟೆಯ ಸುತ್ತಲು ಕೊಬ್ಬು ಆವರಿಸುವುದು.
ನಿದ್ರೆಯ ಕೊರತೆ
ನೀವು ನಿದ್ರಿಸುತ್ತಾ ಇರುವಾಗ ಕೊಬ್ಬು ಶಕ್ತಿಯ ರೂಪದಲ್ಲಿ ಕರಗುತ್ತಾ ಇರುತ್ತದೆ. ಸರಿಯಾಗಿ ನಿದ್ರೆ ಮಾಡದೆ ಇದ್ದಾಗ ದೇಹವು ಕೊಬ್ಬನ್ನು ಕರಗಿಸಲು ವಿಫಲವಾಗುತ್ತದೆ
ಒತ್ತಡ
ಕೊರ್ಟಿಸಲ್ ಎಂದು ಕರೆಯಲ್ಪಡುವ ಸ್ಟಿರಾಯ್ಡ್ ಹಾರ್ಮೋನು ಒತ್ತಡದಿಂದಾಗಿ ಹೆಚ್ಚಾಗುತ್ತದೆ. ಹೊಟ್ಟೆಯ ಸುತ್ತಲು ಬೊಜ್ಜು ಉಂಟಾಗಲು ಕೊರ್ಟಿಸಲು ಪ್ರಮುಖ ಕಾರಣವಾಗಿದೆ.
ಏರೇಟೆಡ್ ಪಾನೀಯಗಳು
ಸಕ್ಕರೆ ಮತ್ತು ಕಾರ್ಬೋನೇಟ್ ಒಳಗೊಂಡಿರುವ ಈ ಪಾನೀಯಗಳು ಹೊಟ್ಟೆಯನ್ನು ಉಬ್ಬಿಸುತ್ತದೆ. ಇದರಿಂದಾಗಿ ಹೊಟ್ಟೆಯ ಸುತ್ತಲು ಕೊಬ್ಬು ಶೇಖರಣೆಯಾಗುತ್ತದೆ.
ರಾತ್ರಿ ತಡವಾಗಿ ಊಟ ಮಾಡುವುದು
ನಿದ್ರೆಯಲ್ಲಿರುವಾಗ ದೇಹವು ಕೊಬ್ಬನ್ನು ಕರಗಿಸುತ್ತದೆ. ಆದರೆ ಹೊಟ್ಟೆ ತುಂಬಿಸಿಕೊಂಡು ಮತ್ತು ರಾತ್ರಿ ತಡವಾಗಿ ಊಟ ಮಾಡಿದಾಗ ಕೊಬ್ಬು ಕರಗಲು ಸಾಧ್ಯವಾಗುವುದಿಲ್ಲ. ಮಲಗುವ ಮೊದಲು ನೀವು ಸೇವಿಸಿದ ಆಹಾರ ಕರಗಬೇಕು.
ಆಲ್ಕೋಹಾಲ್
ಯಾವುದೇ ಪೋಷಕಾಂಶಗಳು ಇಲ್ಲದ ಹೆಚ್ಚಿನ ಕ್ಯಾಲರಿ ಆಲ್ಕೋಹಾಲ್ ನಲ್ಲಿದೆ. ಇದರಿಂದಾಗಿ ಹೊಟ್ಟೆಯ ಸುತ್ತಲು ಕೊಬ್ಬು ಶೇಖರಣೆಯಾಗುತ್ತದೆ.
ಉಪಹಾರ ಬಿಡುವುದು
ಉಪಹಾರ ಬಿಟ್ಟಾಗ ನಿಮಗೆ ಬೇಕಿರುವ ಕ್ಯಾಲರಿ ಸಿಗುವುದಿಲ್ಲ ಮತ್ತು ಇದರಿಂದಾಗಿ ಹೆಚ್ಚಿನ ಆಹಾರ ತಿನ್ನಬೇಕಾಗುತ್ತದೆ. ಇದರಿಂದ ಕ್ಯಾಲರಿ ಸಂಗ್ರಹಣೆಯಾಗುತ್ತದೆ ಮತ್ತು ಕರಗುವುದಿಲ್ಲ. ಇದು ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ.
ವಯಸ್ಸು
ವಯಸ್ಸಾಗುತ್ತಿರುವಂತೆ ದೇಹದ ತೂಕ ಕೂಡ ಹೆಚ್ಚುತ್ತಾ ಹೋಗುತ್ತದೆ. ಇನ್ನೊಂದು ಕಡೆಯಲ್ಲಿ ಕೊಬ್ಬು ಕರಗುವುದು ಕಡಿಮೆಯಾಗುತ್ತದೆ. ಇದರಿಂದಾಗಿ ಹೊಟ್ಟೆಯ ಸುತ್ತಲು ಕೊಬ್ಬು ಶೇಖರಣೆಯಾಗುತ್ತದೆ. ಇದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ.
Comments are closed.