ಕರ್ನಾಟಕ

ಪೂರಕ ಪರೀಕ್ಷೆಯಲ್ಲಿ ಫೇಲು: ವಿದ್ಯಾರ್ಥಿನಿ ನೇಣು

Pinterest LinkedIn Tumblr

hang.jpgaaaaaaaaa

ಬೆಂಗಳೂರು, ಜು.೨೯: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ನೊಂದು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಇಟ್ಟಮಡುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಇಟ್ಟಮಡುವಿನ ಅಕ್ಷತಾ (೧೮) ಆತ್ಮಹತ್ಯೆ ಮಾಡಿಕೊಂಡವಳು. ಇತ್ತೀಚೆಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ನೊಂದ ಅಕ್ಷತಾ ರಾತ್ರಿ ೯.೩೦ರವೇಳೆ ಫ್ಯಾನಿಗೆ ನೇಣು ಬಿಗಿದು ಕೊಂಡಿದ್ದಾಳೆ. ಮನೆಯಲ್ಲಿದ್ದ ಆಕೆಯ ಅಜ್ಜಿ ಇದನ್ನು ನೋಡಿ ಹೊರಗೆ ಬಂದು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.

ಅಲ್ಲಿದ್ದ ಸ್ಥಳೀಯರು ಬಂದು ನೇಣಿಗೆ ಕುಣಿಕೆಯನ್ನು ಸಡಿಲಗೊಳಿಸಿ ಅಕ್ಷತಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಅಕ್ಷತಾ ತಂದೆ ಇತ್ತೀಚೆಗೆ ಮೃತಪಟ್ಟಿದ್ದು, ತಾಯಿ ಮತ್ತು ಅಜ್ಜಿಯ ಜೊತೆ ವಾಸವಾಗಿದ್ದಳು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.