ಅಂತರಾಷ್ಟ್ರೀಯ

ವಿಶ್ವಸುಂದರಿ ಕನಸು ಹೊತ್ತು ಬಂದು 15 ವರ್ಷ ಜೈಲು ಶಿಕ್ಷೆಗೆ ಗುರಿಯಾದ ರೂಪದರ್ಶಿ!

Pinterest LinkedIn Tumblr

model-newಬೀಜಿಂಗ್: ವಿಶ್ವಸುಂದರಿ ಸ್ಫರ್ಧೆಯಲ್ಲಿ ಭಾಗವಹಿಸಲು ಚೀನಾಗೆ ಹೋಗಿದ್ದ ಕೊಲಂಬಿಯಾದ ರೂಪದರ್ಶಿ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

22 ವರ್ಷದ ಜೂಲಿಯಾನ ಲೋಪೆಜ್‌ ಸರಝೋಲಾ ಚೀನಾದಲ್ಲಿ ನಡೆಯಲಿದ್ದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಳು. ಇದೇ ವೇಳೆ ಡ್ರಗ್ಸ್‌ ಸಾಗಿಸಿದ ಅರೋಪಕ್ಕೆ ಒಳಗಾದ ಆಕೆಯ ಅಪರಾಧ ಸಾಬೀತಾಗಿದ್ದು ಚೀನಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಕೊಲಂಬಿಯಾದ ಮಿಸ್ ಅಂಟಿಕೋಯಾ ಸೌಂದರ್ಯ ಸ್ಪರ್ಧೆಯ ವಿಜೇತೆಯಾಗಿದ್ದ ಸರಝೋವಾ, ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನೊಂದಿಗೆ ಕಳೆದ ವರ್ಷ ಜುಲೈ 18 ರಂದು ಚೀನಾಕ್ಕೆ ಬಂದಿದ್ದಳು. ಲ್ಯಾಪ್‌ಟಾಪ್‌ನಲ್ಲಿ 610 ಗ್ರಾಂ ಕೊಕೇನ್‌ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆಕೆ ಗುವಾಂಗ್ಝೌ ಬೈಯೂನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಜೀವಾವಧಿ ಶಿಕ್ಷೆಯ ಭಯದಿಂದ ನಾಪತ್ತೆಯಾಗಿದ್ದ ಸರಝೋವಾಳನ್ನು ಪತ್ತೆ ಮಾಡಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ನನಗೆ ಇಲ್ಲಿನ ಖರ್ಚುವೆಚ್ಚ ತೂಗಿಸಲು ಹಣ ಬೇಕಾಗಿತ್ತು. ಹೀಗಾಗಿ ಡ್ರಗ್ಸ್ ಕಳ್ಳ ಸಾಗಣೆದಾರನ ಜೊತೆ ಸೇರಿ ತಪ್ಪು ಮಾಡಿದೆ ಎಂದು ಆಕೆ ತನ್ನ ತಪ್ಪನ್ನು ಒಪ್ಪಿ ಕೊಂಡಿದ್ದಾಳೆ.

Comments are closed.