
ವಾಷಿಂಗ್ಟನ್: ಯಾವುದೇ ಐಸ್‍ಕ್ರೀಮ್ ಆದ್ರೂ ಫ್ರಿಡ್ಜ್‍ನಿಂದ ಹೊರಗೆ ತೆಗೆದ ಕೆಲವೇ ನಿಮಿಷದಲ್ಲಿ ಕರಗೋಕೆ ಶುರುವಾಗುತ್ತೆ. ಆದ್ರೆ ಇಲ್ಲೊಬ್ಬ ಆಹಾರ ತಜ್ಞ ಎಷ್ಟೇ ಬಿಸಿಲಿದ್ರೂ ಕರಗದೇ ಇರುವಂತಹ ಐಸ್‍ಕ್ರೀಮ್ ತಯಾರಿಸಿದ್ದಾರೆ.
ನ್ಯೂಯಾರ್ಕ್‍ನ ರಾಬ್ ಕೊಲಿಗೊನ್ ಅನ್ನೋರು ಈ ಐಸ್‍ಕ್ರೀಮ್ ತಯಾರಿಸಿದ್ದು ಇದಕ್ಕೆ ಗ್ಯಾಸ್ಟ್ರೋನಾಟ್ ಅಂತ ಹೆಸರಿಡಲಾಗಿದೆ. ಈ ಐಸ್‍ಕ್ರೀಮ್ ನೋಡಲು ಬಿಸ್ಕೆಟ್‍ನಂತೆ ಕಾಣುತ್ತದೆ. ಆದರೆ ಇದನ್ನ ತಿಂದ್ರೆ ಐಸ್‍ಕ್ರೀಮ್ ಸವಿದ ಅನುಭವವಾಗುತ್ತಂತೆ.
ಐಸ್‍ಕ್ರೀಮ್ ಕರಗದಂತೆ ಮಾಡಲು ಇದನ್ನ ಫ್ರೀಝ್ ಡ್ರೈ ಮಾಡಲಾಗಿದೆ. ಫ್ರೀಝ್ ಡ್ರೈಯಿಂಗ್ ಮಾಡುವಾಗ ಆಹಾರ ಪದಾರ್ಥವನ್ನ ಮೊದಲಿಗೆ ಫ್ರೀಝ್ ಮಾಡಲಾಗುತ್ತದೆ. ನಂತರ ಅದಕ್ಕೆ ವ್ಯಾಕ್ಯೂಮ್ ಕೊಟ್ಟು ಫ್ರೀಝ್ ಆದ ದ್ರವ ಆವಿಯಾಗುವಂತೆ ಮಾಡಲಾಗುತ್ತದೆ. ನಂತರ ನೀರಿನ ಅಂಶ ಇಲ್ಲದಾಗಿ ಕೇವಲ ಗಟ್ಟಿ ಪದಾರ್ಥ ಉಳಿಯುತ್ತದೆ. ಫ್ರೀಝ್ ಡ್ರೈಡ್ ಐಸ್‍ಕ್ರೀಮ್‍ಗಳನ್ನ ಸ್ಪೇಸ್ ಮ್ಯೂಸಿಯಂ ಮತ್ತು ಕ್ಯಾಂಪಿಂಗ್ ಸ್ಟೋರ್‍ಗಳಲ್ಲಿ ಮಾರಲಾಗುತ್ತೆ. ಇದಕ್ಕೆ ಆಸ್ಟ್ರೋನಾಟ್ ಐಸ್‍ಕ್ರೀಮ್ ಅಂತಲೂ ಕರೀತಾರೆ.
ಇದೇ ಪರಿಕಲ್ಪನೆಯನ್ನ ಬಳಸಿಕೊಂಡು 3 ವರ್ಷಗಳ ಪರಿಶ್ರಮದಿಂದ ಗ್ಯಾಸ್ಟ್ರೋನಾಟ್ ಐಸ್‍ಕ್ರೀಮ್ ತಯಾರಿಸಲಾಗಿದ್ದು, ಇದೀಗ ರಾಬ್ ಈ ಐಸ್‍ಕ್ರೀಮನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸಿದ್ದಾರೆ.
Comments are closed.