ಅಂತರಾಷ್ಟ್ರೀಯ

ನಿಮ್ಮಲ್ಲಿ ಫ್ರಿಡ್ಜ್ ಇಲ್ಲದಿದ್ದರೂ ಇನ್ನು ಮುಂದೆ ಮಾಂಸವನ್ನು ವಾರಗಟ್ಟಲೆ ಹಾಳಾಗದಂತೆ ಕಾಪಾಡಬಹುದು….ಹೇಗೆ ಎಂಬುದನ್ನು ಮುಂದೆ ಓದಿ…

Pinterest LinkedIn Tumblr

meat bbb

ಇನ್ನು ಮುಂದೆ ಮಾಂಸವನ್ನು ವಾರಗಟ್ಟಲೆ ಹಾಳಾಗದಂತೆ ಕಾಪಾಡಬಹುದಾದ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ. ಮಾಂಸಾಹಾರವನ್ನು ವಾರಗಟ್ಟಲೆ ಶೀತಲ ಸಂಗ್ರಹ ಸೌಲಭ್ಯದಲ್ಲಿ ಕಾಪಿಡುವ ಸರಳ ತಂತ್ರಜ್ಞಾನವೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವು ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ಮಾಂಸಾಹಾರವು ಕತ್ತರಿಸಿದ ನಂತರ ತಾಜಾ ಆಗಿ ಕೇವಲ ಆರು ಗಂಟೆಯವರೆಗೆ ಶೀತಲೀಕರನ ಯಂತ್ರ ಅಗತ್ಯವಿಲ್ಲದೆ ಇರುತ್ತದೆ ಮತ್ತು ಎರಡು ದಿನಗಳವರೆಗೆ ಶೀತಲೀಕರನ ಯಂತ್ರ ದಲ್ಲಿ ಇರುತ್ತದೆ. ಮಾಂಸ ಮಳಿಗೆಯ ಮಾಲಕರು ಮತ್ತು ಶೀತಲ ಸಂಗ್ರಹ ಮ್ಯಾನೇಜರ್‌ಗಳ ಪ್ರಕಾರ ನಂತರ ಮಾರಾಟವಾಗದ ಮಾಂಸ ನಷ್ಟವಾಗಿಬಿಡುತ್ತದೆ.

ಡಿಆರ್‌ಡಿಒನ ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ (ಡಿಎಫ್‌ಆರ್‌ಎಲ್) ಪ್ರಾಣಿಗಳ ಉತ್ಪನ್ನ ವಿಭಾಗದ ವಿಜ್ಞಾನಿಗಳು ವಿಶೇಷ ರಸವನ್ನು ದಾಳಿಂಬೆ ಸಿಪ್ಪೆಗಳಿಂದ ಅಭಿವೃದ್ಧಿಪಡಿಸಿದ್ದಾರೆ. ಅವುಗಳನ್ನು ಮಾಂಸಕ್ಕೆ ಚುಚ್ಚಿದರೆ ಮತ್ತು ಹಚ್ಚಿದರೆ ವಿನಾಶಕಾರಿ ಬ್ಯಾಕ್ಟೀರಿಯ ಕಾರ್ಯದಿಂದ ಮಾಂಸ ನಷ್ಟವಾಗುವುದನ್ನು ತಪ್ಪಿಸಬಹುದು. ಅದು ವಾರದವರೆಗೆ ಸಹಜವಾದ ರುಚಿಯಲ್ಲೇ ಯಾವುದೇ ಸಮಸ್ಯೆಯಿಲ್ಲದೆ ಉಳಿಯುತ್ತದೆ.

ಡಿಎಫ್‌ಆರ್‌ಎಲ್ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಕುರಿ ಮಾಂಸದ ಮೇಲೆ ಮಾಡಿದ್ದಾರೆ. ಆದರೆ ದಾಳಿಂಬೆ ಸಿಪ್ಪೆ ರಸದ ತಂತ್ರಜ್ಞಾನದಿಂದ ಕೋಳಿ ಮತ್ತು ಹಂದಿ ಮಾಂಸವನ್ನೂ ಕಾಪಿಡಬಹುದು. ಈಗ ತಾಜಾ ಕುರಿ ಮಾಂಸವನ್ನು 20 ಗಂಟೆಗಳ ಮೇಲೆ ಕಾಪಿಡಲು ಯಾವುದೇ ರಾಸಾಯನಿಕ ಸಂಗ್ರಹಗಾರಗಳು ಲಭ್ಯವಿಲ್ಲ. ಪ್ರಕೃತಿಸಹಜವಾದ ಆಹಾರ ಸಂಗ್ರಹಾರಗಳನ್ನು ಗುರುತಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ದಾಳಿಂಬೆ ಸಿಪ್ಪೆ ರಸದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದಾರೆ. ಇದರಿಂದ ಏಳು ದಿನಗಳ ಕಾಲ ಸಾಮಾನ್ಯ ಪರಿಸರದಲ್ಲೇ ಕುರಿ ಮಾಂಸ ತಾಜಾ ಆಗಿರುವುದು ತಿಳಿದಿದೆ.

ದಾಳಿಂಬೆ ಸಿಪ್ಪೆಗಳು ಶಕ್ತಿಯುತ ಆ್ಯಂಟಿ ಆಕ್ಸಿಡಂಟ್‌ಗಳಾಗಿ ಆ್ಯಂಟಿಮೈಕ್ರೋಬಿಯಲ್ ತತ್ವಗಳನ್ನು ಹೊಂದಿವೆ ಎನ್ನುತ್ತಾರೆ ಡಿಎಫ್‌ಆರ್‌ಎಲ್‌ನ ಆಹಾರ ಸಂಗ್ರಹದ ಮುಖ್ಯಸ್ಥ ಪಿಇ ಪಾಟ್ಕಿ. ಕೋಣೆಯ ತಾಪಮಾನದಿಂದ ಹೊರಗಿಟ್ಟಾಗಲೂ ಬ್ಯಾಕ್ಟೀರಿಯವು ಮಾಂಸಾಹಾರದ ಮೇಲೆ ಸಕ್ರಿಯವಾಗುವುದನ್ನು ತಪ್ಪಿಸಿದೆ. ಸಾಮಾನ್ಯವಾಗಿ ಶೀತಲೀಕರಣ ವ್ಯವಸ್ಥೆಯಲ್ಲಿ ಬಹಳ ಹೊತ್ತು ಇಟ್ಟ ಮಾಂಸಕ್ಕೆ ಎಸ್ಚೆರಿಷಿಯ ಕೊಲಿ, ಸಾಲ್ಮೊನೆಲ್ಲ, ಕ್ಯಾಂಪಿಲೋಬ್ಯಾಕ್ಟರ್, ಜೆನುನಿ, ಕ್ಲೋಸ್ಟ್ರಿಡಿಯಂ ಬೊಟುಲಿನಮ್, ಕ್ಲೋಸ್ಟ್ರಿಡಿಯಂ ಪೆರಫ್ರಿಂಜೆನ್ಸ್ ಮೊದಲಾದ ಬ್ಯಾಕ್ಟೀರಿಯಗಳು ತಗಲುತ್ತವೆ. ಈ ಮಾಂಸ ಸೇವನೆಯಿಂದ ಹೊಟ್ಟೆ ನೋವು, ತಲೆನೋವು, ಜ್ವರ, ಅತಿಸಾರ ಮತ್ತು ಮರಣವೂ ಸಂಭವಿಸಬಹುದು. ಈ ಬ್ಯಾಕ್ಟೀರಿಯಗಳು ಮಾಂಸಾಹಾರಕ್ಕೆ ಬರದಂತೆ ಹೊಸ ತಂತ್ರಜ್ಞಾನದ ಮೂಲಕ ಸಂಗ್ರಹಿಸಬಹುದು. ಮುಖ್ಯವಾಗಿ ಸಂಶೋಧನೆಯು ಪ್ರಾಕೃತಿಕ ರಕ್ಷಣೆಯ ಬಳಕೆಗೆ ಹಾದಿ ಹುಡುಕುವ ಗುರಿ ಹೊಂದಿತ್ತು. ದೂರದ ಸ್ಥಳಗಳಲ್ಲಿ ಕೆಲಸ ಮಾಡುವ ಸೇನಾ ಜವಾನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಬಹಳ ಸಮಯ ಶೀತಲೀಕರಣದಲ್ಲಿಡುವ ವಿಧಾನಕ್ಕಾಗಿ ಸಂಶೋಧನೆ ನಡೆದಿದೆ. ಈಗಿನ ಹೊಸ ತಂತ್ರಜ್ಞಾನ ಆ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಹಿರಿಯ ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಮಾಂಸೋದ್ಯಮಕ್ಕೆ ಮತ್ತು ಜನಸಾಮಾನ್ಯರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿ ಬಳಿಕ ಅದರ ವಾಣಿಜ್ಯ ಬಳಕೆಯ ವಿಶ್ಲೇಷಣೆಯನ್ನು ಸಂಬಂಧಿಸಿದ ವಿಭಾಗಗಳು ನಡೆಸಲಿವೆ.

Comments are closed.