ಕರಾವಳಿ

ಮನೆ ಮದ್ದು ಬಳಸಿ ; ತಿಂಗಳಿನ ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಿರಿ.

Pinterest LinkedIn Tumblr

Mensess_Problem_medicin1

ಮಂಗಳೂರು / ಬೆಂಗಳೂರು : ಬಹಳ ಮಂದಿ ಮಹಿಳೆಯರು ಮತ್ತು ಯುವತಿಯರು ತಿಂಗಳ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಮತ್ತು ನೋವಿನಿಂದ ಬಳಲುತ್ತಿರುತ್ತಾರೆ. ಆ ನೋವುಗಳನ್ನು ಶಮನಗೊಳಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ಮಾತ್ರೆ ಔಷಧಿಗಳ ಮೊರೆ ಹೋಗುತ್ತಾರೆ. ಮುಟ್ಟಿನ ಸಮಯದ ರಕ್ತಸ್ರಾವವು ಏಳು ದಿನಗಳಿಗಿಂತ ಹೆಚ್ಚು ಉಂಟಾದಲ್ಲಿ, ಸುಸ್ತು, ಆಯಾಸ, ತಲೆನೋವು ನಿಶ್ಯಕ್ತಿ ಮತ್ತು ಅಧಿಕ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿರುವ ಹಾರ್ಮೋನುಗಳು ನಿಯಂತ್ರಣವನ್ನು ಹೊಂದಿಲ್ಲದೇ ಇದ್ದಾಗ, ಅಥವಾ ಪಿತ್ತ ದೋಷ ನಿಯಂತ್ರಣ ತಪ್ಪಿದಾಗ ಈ ರೀತಿ ಸಂಭವಿಸುತ್ತದೆ. ಅತಿಯಾದ ಉಪವಾಸ, ಹೆಚ್ಚಿನ ಒತ್ತಡ, ಖಾರದ ಮಸಾಲೆ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಮತ್ತು ಅಧಿಕವಾಗಿ ದೇಹವನ್ನು ದಂಡಿಸುವುದು, ಹೀಗೆ ಇವೆಲ್ಲಾವು ಪರೋಕ್ಷವಾಗಿ ಮುಟ್ಟಿನ ಸಮಯದ ಸಮಸ್ಯೆಗಳಿಗೆ ಕಾರಣವಾಗಿ ಬಿಡುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ಅತಿಯಾದ ರಕ್ತಸ್ರಾವವನ್ನು ಕಡಿಮೆ ಮಾಡಲು ಇಲ್ಲಿದೆ ಮನೆ ಮದ್ದುಗಳು.

Home_Medicins

ನೆಲ್ಲಿಕಾಯಿ :

ನೆಲ್ಲಿಕಾಯಿ ಹಲವಾರು ರೋಗಗಳನ್ನು ನಿವಾರಿಸುವುದರಲ್ಲಿ ಎತ್ತಿದ ಕೈ.ನೆಲ್ಲಿಕಾಯಿ ಯಿಂದ ಋತುಚಕ್ರದ ಸಮಯದ ಅತಿಯಾದ ರಕ್ತಸ್ರಾವ ಮತ್ತು ನೋವನ್ನು ತಡೆಯ ಬಹುದು.

ಎರಡು ದೊಡ್ಡ ಗಾತ್ರದ ಅಥವಾ ನಾಲ್ಕು ಚಿಕ್ಕಗಾತ್ರದ ನೆಲ್ಲಿಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಬೀಜವನ್ನು ತೆಗೆಯಿರಿ. ಮಿಕ್ಸಿಯಲ್ಲಿ ಕೊಂಚ ನೀರಿನೊಂದಿಗೆ ತಿರುಳನ್ನು ಸೇರಿಸಿ ಅರೆಯಿರಿ ಈ ನೀರನ್ನು ತೆಳ್ಳನೆಯ ಮಸ್ಲಿನ್ ಬಟ್ಟೆ ಅಥವಾ ಸೋಸುಕ ಬಳಸಿ ನೀರು ಸಂಗ್ರಹಿಸಿ. ಈ ನೀರಿಗೆ ಕೊಂಚ ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಕುಡಿಯಬಹುದು. ರುಚಿ ಇಷ್ಟವಾಗದಿದ್ದರೆ ಕೊಂಚ ಜೇನನ್ನು ಸೇರಿಸಿ ಕುಡಿಯಬಹುದು. ಮಧುಮೇಹಿಗಳಿಗೆ ಜೇನು ಸಲ್ಲದು. ಆದ್ದರಿಂದ ಮಧುಮೇಹಿಗಳು ಉಪ್ಪು, ಜೇನು ಸೇರಿಸದ ರಸ ಕುಡಿಯುವುದು ಉತ್ತಮ.

ಶುಂಠಿ :

ಆಯುರ್ವೇದದಲ್ಲಿ ಶುಂಠಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಶುಂಠಿ ಕೂಡಾ ಬಹಳಷ್ಟು ಖಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.
ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತರ ಅದರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗದಿದ್ದರೆ ಜೇನುತುಪ್ಪ ಇಲ್ಲ ಸಕ್ಕರೆ ಅಥವಾ ಬೆಲ್ಲ ಸೇರಿಸಿಯೂ ಸೇವಿಸಬಹುದು. ಮುಟ್ಟಿನ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು.

ಲಿಂಬು-ಮೊಸಂಬಿ :

ಹಣ್ಣಿನ ರಸ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೊಸಂಬಿ ರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೊಸಂಬಿ ರಸದಲ್ಲಿ ನಿಮಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಜೀರಿಗೆ :

ಎರಡು ಟೇಬಲ್ ಸ್ಪೂನ್ ಜೀರಿಗೆ ಹೌದು, ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ಹಳದಿ ಬಣ್ಣಕ್ಕೆ ತಿರುಗಿದ ನಂತರ ಬೇಕು ಅನ್ನಿಸಿದರೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗುತ್ತೆ.

Comments are closed.