
ಚೆನ್ನೈ: ಹೀರೋಯಿಸಮ್ ಸಿಲ್ವರ್ ಸ್ಕ್ರೀನ್‍ನಲ್ಲಿ ಅದ್ಭುತವಾಗಿ ಕಂಡುಬರುತ್ತೆ. ಆದ್ರೆ ಅದೇ ರಿಯಲ್ ಲೈಫ್‍ನಲ್ಲಿ ಆದ್ಯಾವುದೂ ನಡೆಯಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರಾಣವನ್ನ ಪಣಕ್ಕಿಟ್ಟು ಅತ್ಯಾಚಾರಕ್ಕೊಳಗಾಲಿದ್ದ ಮಹಿಳೆಯನ್ನ ರಕ್ಷಿಸಿದ್ದಾರೆ.
ಚೆನ್ನೈನ ನಿವಾಸಿ ವಸಂತ್ ಪೌಲ್ ಪೋಸ್ಟ್ ಫೇಸ್‍ಬುಕ್‍ನಲ್ಲಿ ವೈರಲ್ ಆಗಿದ್ದು, ವಸಂತ್ ಕಾಳಜಿಗೆ ಫೇಸ್‍ಬುಕ್ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಏನಿದು ಸ್ಟೋರಿ?: ವಸಂತ್ ಪೌಲ್ ಶುಕ್ರವಾರ ಸಂಜೆ ಕಬಾಲಿ ಸಿನಿಮಾ ನೋಡಿ ಹಿಂತಿರುಗುತ್ತಿದ್ದ ವೇಳೆ, ಮೂವರು ಯುವಕರು ಮಹಿಳೆಯನ್ನ ವಿವಸ್ತ್ರಗೊಳಿಸುತ್ತಿದ್ದರು. ಇದನ್ನು ಕಂಡ ವಸಂತ್ ತಾನೊಬ್ಬನೇ ಇದ್ದರೂ ಮೂವರ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಈ ವೇಳೆ ಯುವಕರು ವಸಂತ್‍ನನ್ನ ಹಿಡಿದುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಹಗ್ಗದಲ್ಲಿ ಕಟ್ಟಿಹಾಕಲು ಪ್ರಯತ್ನಿಸಿದ್ದಾರೆ.
ಮಹಿಳೆ ಬಚಾವ್: ಇತ್ತ ಮೂವರು ಯುವಕರು ವಸಂತ್ ಮೇಲೆ ದಾಳಿ ಮಾಡುತ್ತಿದ್ದ ವೇಳೆ ಮಹಿಳೆ ಅಲ್ಲಿಂದ ಓಡಿಹೋಗಿ ರಕ್ಷಣೆ ಮಾಡಿಕೊಂಡಿದ್ದಾರೆ. ನಂತರ ವಸಂತ್‍ನನ್ನ ಬಿಟ್ಟು ಕಾಮುಕರು ಪರಾರಿಯಾಗಿದ್ದಾರೆ.
ಘಟನೆ ನಡೆದ ಬಳಿಕ ವಸಂತ್ ಎಲ್ಲಾ ವಿಚಾರವನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಮಹಿಳೆಯನ್ನ ರಕ್ಷಿಸಿದ್ದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ. ಇದನ್ನ ಓದಿದವರು ವಸಂತ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿಯವರೆಗೂ 35 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
Comments are closed.