ಮುಂಬೈ: ಸಲ್ಮಾನ್ ಖಾನ್ ಗರ್ಲ್ಫ್ರೆಂಡ್ ಲೂಲಿಯಾ ತಮ್ಮ ಬರ್ತಡೇವನ್ನು ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ. 36ನೇ ಬರ್ತಡೇ ಸಂಭ್ರಮವನ್ನು ಲೂಲಿಯಾ ನಿನ್ನೆ ಆಚರಿಸಿಕೊಂಡ್ರು..ಈ ವೇಳೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಭಾಗಿಯಾಗಿ ಶುಭಾಷಯ ಕೋರಿದ್ರು. ಪ್ರೀತಿ ಜಿಂಟಾ ಮೂವರು ಖಾನ್ಗಳ ಜತೆಗೆ ತುಂಬಾ ಕ್ಲೋಸ್ ಆಗಿದ್ದಾರೆ. ಆದ್ದರಿಂದ ಸ್ಪೆಶಲ್ ಗರ್ಲ್ ಆಗಿ ಪ್ರೀತಿ ಜಿಂಟಾ ಲೂಲಿಯಾ ಹುಟ್ಟುಹಬ್ಬದ ದಿನದಂದು ಆಗಮಿಸಿದ್ದರು.
ಈ ವೇಳೆ ಲೂಲಿಯಾ ಜತೆಗೆ ಪ್ರೀತಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ… ಸಲ್ಮಾನ್ ಖಾನ್ ಗೆಳತಿ ಲೂಲಿಯಾ ಬರ್ತಡೇ ಸಂಭ್ರಮದ ವೇಳೆ ಹಲವು ಬಾಲಿವುಡ್ ಮಂದಿ ಭಾಗಿಯಾಗಿ ಶುಭಾಷಯ ಕೋರಿದ್ದಾರೆ.
ಸಾನಿಯಾ ಮಿರ್ಜಾ ಅವರ ಎಸ್ ಅಗೈನಿಸ್ಟ್ ಒಡ್ಸ್ ಪುಸ್ತ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸಲ್ಲುಗೆ ಸಾನಿಯಾ ಮಿರ್ಜಾ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ಎಲ್ಲರೂ ಸದ್ಯ ಇದೇ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ನಾನು ಅದನ್ನೇ ಕೇಳುತ್ತೇನೆ. ಸಲ್ಮಾನ್ ಜೀ ನೀವು ಯಾವಾಗ ವಿವಾಹವಾಗುತ್ತೀರಿ ಅಂದ್ರು. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ ನವೆಂಬರ್ 18 ಅಂತ ಹೇಳಿಕೆ ನೀಡಿದ್ದರು.
ಅಂದ್ಹಾಗೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಸಲ್ಲು ತಾಯಿ ಸಲ್ಮಾ ಖಾನ್ ಅವರನ್ನು ವಿವಾಹವಾಗಿದ್ದು ಇದೇ ದಿನಾಂಕದಂದು ಅಂತೆ. ಇನ್ನು ಸಲ್ಲು ಮುದ್ದಿನ ಸಹೋದರಿ ಅರ್ಪಿತಾ ಖಾನ್ ಎರಡು ವರ್ಷಗಳ ಹಿಂದೆ ಇದೇ ದಿನಾಂಕದಂದು ವಿವಾಹವಾಗಿದ್ದರು. ಹಾಗಾಗಿ ಸಲ್ಲು ಕೂಡ ಇದೇ ದಿನ ವಿವಾಹವಾಗುತ್ತಾರಂತೆ.
Comments are closed.