ಕರ್ನಾಟಕ

ಜಾನ್ ಜಾನಿ ಜನಾರ್ಧನ್ ನಲ್ಲಿ “ಐಟಂ ಗರ್ಲ್’ ಆಗಿ ಐಂದ್ರಿತಾ ರೇ

Pinterest LinkedIn Tumblr

anditra_item_song

ಮಂಗಳೂರು/ಬೆಂಗಳೂರು,ಜುಲೈ.25: ಪ್ರೇಮ್ ಅಡ್ಡ’, ‘ಕಡ್ಡಿಪುಡಿ’ ಮತ್ತು ‘ಶಾರ್ಪ್ ಶೂಟರ್’ ಚಿತ್ರಗಳಲ್ಲಿ ಬಿಸಿ ಬಿಸಿ ಆಗಿ ಕಾಣಿಸಿಕೊಂಡಿದ್ದ ನಟಿ ಐಂದ್ರಿತಾ ರೇ ‘ಮುಂಗಾರು ಮಳೆ-2’ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ನೀವು ಓದಿದಿರಿ.

ಈಗ ಐಂದ್ರಿತಾ ರೇ ಬಗ್ಗೆ ಮತ್ತೊಂದು ಅಪ್ ಡೇಟ್ ತಂದಿದ್ದೀವಿ ಕೇಳಿ…ಗುರು ದೇಶಪಾಂಡೆ ನಿರ್ದೇಶನದ ‘ಜಾನ್ ಜಾನಿ ಜನಾರ್ಧನ್’ ಚಿತ್ರದ ಐಟಂ ಹಾಡಿಗೆ ನಟಿ ಐಂದ್ರಿತಾ ರೇ ಸೊಂಟ ಬಳುಕಿಸಿದ್ದಾರೆ.

‘ಲೂಸ್ ಮಾದ’ ಯೋಗಿ, ‘ಕೃಷ್ಣ’ ಅಜೇಯ್ ರಾವ್ ಮತ್ತು ‘ಮದರಂಗಿ’ ಕೃಷ್ಣ ಅಭಿನಯದ ಸಿನಿಮಾ ‘ಜಾನ್ ಜಾನಿ ಜನಾರ್ಧನ್’. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಡ್ಯಾನ್ಸಿಂಗ್ ನಂಬರ್ ಗೆ ಐಂದ್ರಿತಾ ರೇ ಹೆಜ್ಜೆ ಹಾಕಿದ್ದಾರೆ.

ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಈ ಐಟಂ ಸಾಂಗ್ ನ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಮೂಡಿಬರುವ ನಾಯಕ ನಟರ ಡ್ರೀಮ್ ಸಾಂಗ್ ಗೆ ‘ಕನಸಿನ ರಾಣಿ’ ಆಗಿ ಹೆಜ್ಜೆ ಹಾಕಿದ್ದಾರೆ ನಟಿ ಐಂದ್ರಿತಾ ರೇ.

Comments are closed.