ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅತಿಥೇಯ ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 92 ರನ್ ಗಳಿಂದ ಜಯ ಗಳಿಸಿದೆ.
ವೆಸ್ಟ್ ನ ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ತನ್ನ ಮೊದಲ ಇನ್ನಿಂಗ್ಸ್ ಅನ್ನು 243 ರನ್ ಗಳಿಗೆ ಪೂರ್ಣಗೊಳಿಸಿದ ವಿಂಡೀಸ್ ಫಾಲೋ ಆನ್ ಹೇರಿಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿತು. ದಿನದಾಟದ ಅಂತ್ಯದ ವೇಳೆಗ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ 231 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 92 ರನ್ ಗಳಿಂದ ಟೀಂ ಇಂಡಿಯಾಗೆ ಶರಣಾಯಿತು.
ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಆಟಗಾರರು ಫಾಲೋ ಆನ್ ನಿಂದ ಹೊರಬರಲು ಸಾಧ್ಯವಾಗಿಲ್ಲ.
ಮೊದಲ ಇನ್ನಿಂಗ್ಸ್: ಟೀಂ ಇಂಡಿಯಾ 8 ವಿಕೆಟ್ ಗೆ 566 ಡಿಕ್ಲೇರ್
ಮೊದಲ ಇನ್ನಿಂಗ್ಸ್: ವೆಸ್ಟ್ ಇಂಡೀಸ್ 243 ರನ್ ಗೆ ಆಲೌಟ್, ಫಾಲೋ ಆನ್
ದ್ವಿತೀಯ ಇನ್ನಿಂಗ್ಸ್: ವೆಸ್ಟ್ ಇಂಡೀಸ್ 231 ರನ್ ಗೆ ಆಲೌಟ್
Comments are closed.