ಅಂತರಾಷ್ಟ್ರೀಯ

ನ್ಯೂಜೆರ್ಸಿಯಲ್ಲಿ ಪತ್ನಿಯನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾರತ ಮೂಲದ ವ್ಯಕ್ತಿಯ ಬಂಧನ

Pinterest LinkedIn Tumblr

Pal-and-Seema-Singh

ನ್ಯೂಯಾರ್ಕ್ : ಮಕ್ಕಳು ನಿದ್ರಿಸುತ್ತಿದ್ದ ವೇಳೆ ರಾತ್ರಿ ತನ್ನ ಪತ್ನಿಯನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಭಾರತ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ.

Pal-and-Seema-1

ನಿತಿನ್ ಸಿಂಗ್ ಬಂಧಿತ ವ್ಯಕ್ತಿ. 46 ವರ್ಷದ ನಿತಿನ್ ಸಿಂಗ್ ತನ್ನ ಪತ್ನಿ ಸೀಮಾ ಸಿಂಗ್(42)ರನ್ನು ಕೊಲೆ ಮಾಡಿದ್ದ. ಈ ದೃಶ್ಯವನ್ನು ನೋಡಬಾರದೆಂದು 16 ವರ್ಷ, 6 ವರ್ಷ, 5 ವರ್ಷದ ಮಕ್ಕಳನ್ನು ಹಿಂದಿನ ಬಾಗಿಲಿನಿಂದ ಹೊರಕ್ಕೆ ಕರೆದೊಯ್ಯಲಾಯಿತು ಎಂದು ಅಡುಗೆ ಸಿಬ್ಬಂದಿ ತಿಳಿಸಿದ್ದಾರೆ.

ಮಕ್ಕಳನ್ನು ಸದ್ಯ ಪೆನ್ಸಿಲ್ಲೇನಿಯಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಅವರನ್ನು ಸಂರಕ್ಷಣಾ ಸೇವೆಗಳ ಕಾರ್ಯಕರ್ತರ ವಶಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಾರಣವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

Comments are closed.