
ಮಂಗಳೂರು, ಜು.24: ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಇಂದು ಬೆಳ್ಳಂಬೆಳಗ್ಗೆ (ನಾಲ್ಕು ಗಂಟೆಗೆ) ಪೊಲೀಸ್ ಅಧಿಕಾರಿಗಳ ತಂಡವು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೈಲಿನೊಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಆರೋಪಗಳು ಪದೇ ಪದೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಡಿಸಿಪಿ ಡಾ. ಸಂಜೀವ್ ಪಾಟೀಲ್ ಹಾಗೂ ಶಾಂತರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಸಿಪಿಗಳು, ವಿವಿಧ ಠಾಣೆಯ ಕೆಲವು ಇನ್ಸ್‌ಪೆಕ್ಟರ್‌ಗಳು, ಹಾಗೂ ಕೆ.ಎಸ್.ಆರ್.ಪಿ ಮತ್ತು ಸಿ.ಆರ್.ಪಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜೈಲಿನೊಳಗೆ ವಿವಿಧ ಸ್ಕ್ವಾಡ್‌ನ ಅಧಿಕಾರಿಗಳು ಹಾಗೂ ಬಾರೀ ಸಂಖ್ಯೆಯ ಪೊಲೀಸರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಲಾಯಿತು.ಈ ಸಂದರ್ಭ ಪೊಲೀಸರು, ಜೈಲಿನೊಳಗೆ ಕೈದಿಗಳು ಬಳಸುತ್ತಿದ್ದ ಎರಡು ಮೊಬೈಲ್ ಗಳನ್ನು ಸಿಮ್ ಸಹಿತಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ಕಾರ್ಯಾವನ್ನು ರೂಪಿಸಲಾಗಿದ್ದು, ಇದು ಯಾವಾಗಲು ಜೈಲಿನೊಳಗೆ ಪರಿಶೀಲನೆ ಮಾಡುವಂತೆ ಇಂದು ಕೂಡ ಪರಿಶೀಲನೆ ದೃಷ್ಟಿಯಿಂದ ಕೈಗೊಂಡ ಸಾಮಾನ್ಯ ದಾಳಿಯಾಗಿದೆ. ಯಾವೂದೇ ಮಾಹಿತಿ ಅಧಾರದಲ್ಲಿ ಈ ದಾಳಿಯನ್ನು ನಡೆಸಲಾಗಿಲ್ಲ. ಪರಿಶೀಲನೆ ಸಂದರ್ಭ ಎರಡು ಮೊಬೈಲ್ ಹಾಗೂ ಎರಡು ಸಿಮ್ ಕಾರ್ಡ್ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.
Comments are closed.