ಚೆನ್ನೈ: ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ 250 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವ ಮೂಲಕ ಈವರೆಗಿನ ಎಲ್ಲಾ ದಾಖಲೆಗಳನ್ನು ಕಬಾಲಿ ಮುರಿದಂತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ತಮಿಳುನಾಡು ಥಿಯೇಟರ್ ಗಳಲ್ಲಿಯೇ ನೂರು ಕೋಟಿ ರೂಪಾಯಿ ಗಳಿಕೆ ಮಾಡಿರುವುದಾಗಿ ಪ್ರೊಡ್ಯೂಸರ್ ತಿಳಿಸಿದ್ದಾರೆ.
ತಮಿಳುನಾಡು(100 ಕೋಟಿ) ಸೇರಿದಂತೆ ದೇಶದ ವಿವಿಧ ಚಿತ್ರಮಂದಿರಗಳಲ್ಲಿ (150ಕೋಟಿ) ಕಬಾಲಿ 250 ಕೋಟಿ ಗಳಿಸಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಬಾಲಿವುಡ್ ನ ಪಿಕೆ, ಸುಲ್ತಾನ್ ಸಿನಿಮಾದ ದಾಖಲೆ ಸೇರಿದಂತೆ ಇತ್ತೀಚೆಗಿನ ಬಾಹುಬಲಿ ಸಿನಿಮಾದ ದಾಖಲೆಯನ್ನೂ ಕಬಾಲಿ ಮುರಿಯಲಿದೆ ಎಂದು ಸಿನಿ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ವಿಶ್ವಾದ್ಯಂತ ಕಬಾಲಿ ಶುಕ್ರವಾರ ಸುಮಾರು 8ರಿಂದ 10 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತ್ತು. ಅಮೆರಿಕದ 480 ಸ್ಕ್ರೀನ್, ಮಲೇಶ್ಯಾದ 490 ಹಾಗೂ ಗಲ್ಫ್ ದೇಶಗಳಲ್ಲಿನ 500 ಸ್ಕ್ರೀನ್ ಗಳು ಇದರಲ್ಲಿ ಸೇರಿವೆ.
ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಸ್ವಿಟ್ಜರ್ ಲ್ಯಾಂಡ್, ಡೆನ್ಮಾರ್ಕ್, ಹಾಲೆಂಡ್, ಸ್ವೀಡನ್, ದಕ್ಷಿಣ ಆಫ್ರಿಕಾ ಹಾಗೂ ನೈಜೀರಿಯಾಗಳಲ್ಲಿ ಬಿಡುಗಡೆಯಾಗಿತ್ತು.
ಕಬಾಲಿ ಸಿನಿಮಾವನ್ನು ಪಾ ರಂಜಿತ್ ನಿರ್ದೇಶಿಸಿದ್ದು, ಕಲೈಪುಲಿ ಎಸ್ ಥಾನು ಸಿನಿಮಾದ ನಿರ್ಮಾಪಕರಾಗಿದ್ದಾರೆ. ಸಿನಿಮಾದಲ್ಲಿ ರಜನಿ, ರಾಧಿಕಾ ಅಪ್ಟೆ, ಕಿಶೋರ್ ಮುಖ್ಯಭೂಮಿಕೆಯಲ್ಲಿದ್ದಾರೆ.
-ಉದಯವಾಣಿ
Comments are closed.