
ರಾಮದುರ್ಗ: ಗಂಡನ ಕಿರುಕುಳ ತಾಳದೇ ಪತ್ನಿ ತನ್ನ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಮೂರು ಮಕ್ಕಳು ಮೃತಪಟ್ಟು ತಾಯಿ ಪ್ರಾಣಾಪಾಯದಿಂದ ಪಾರದ ಘಟನೆ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಕುಂದ ಗಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ಹುಲಕುಂದ ಗ್ರಾಮದ ಶಾಂತವ್ವ ಸಿದ್ಧಪ್ಪ ಒಡೆಯರ (35) ಗಂಡನ ಕಿರುಕುಳ ತಾಳಲಾರದೆ ಶನಿವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾಳೆ. ರಾತ್ರಿ ಬಾವಿಯೊಳಗಿನ ಮೆಟ್ಟಲು ಹಿಡಿದು ನೀರಿನಲ್ಲಿದ್ದಾಳೆ ಮೂರು ಮಕ್ಕಳು ಸಾವನ್ನಪ್ಪಿವೆ. ಬೆಳಿಗ್ಗೆ ಗ್ರಾಮಸ್ಥರು ನೋಡಿ ಶಾಂತವ್ವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಮಕ್ಕಳಾದ ಐದು ವರ್ಷದ ರಾದಿಕಾ, ನಾಲ್ಕು ವರ್ಷದ ಸಂಜನಾ ಮತ್ತು ಎರಡು ವರ್ಷದ ರಮೇಶ ಮೃತಪಟ್ಟಿದ್ದು ತಾಯಿಯನ್ನು ರಾಮದುರ್ಗದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಟಕೋಳ ಪೊಲೀಸ್ ಠಾಣೆಯಲ್ಲಿ ಪಿಎಸೈ ರವಿಕುಮಾರ ಧರ್ಮಟ್ಟಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
Comments are closed.