ಬೆಂಗಳೂರು ಜು.22: ಮೊದಲೆಲ್ಲಾ ಕೆಎಸ್ಆರ್ಟಿಸಿ ಬಸ್ ಅಂದ್ರೆ ಮೂಗು ಮುರಿಯುತ್ತಿದ್ದ ಜನ ಈಗ ಮೂಗಿನ ಮೇಲೆ ಕೈ ಇಟ್ಟು ನೋಡಬೇಕಿದೆ. ಆಧುನಿಕ ತಂತ್ರಜ್ಞಾನಗಳ ಬಳಸಿಕೊಂಡು ಹೈಟೆಕ್ ಬಸ್ಗಳನ್ನು ಕೆಎಸ್ಆರ್ಟಿಸಿ ರೋಡಿಗಿಳಿಸಿದೆ. ನೀವು ಇದುವರೆಗೂ ಕಂಡು ಕೇಳಿರದ ಕೆಎಸ್ಆರ್ಟಿಸಿ ಬಸ್ ಹಳ್ಳಿ ಹಳ್ಳಿಗೂ ಸಂಚರಿಸಲು ಸಿದ್ದವಾಗಿದೆ.
ಕೆಎಸ್ಆರ್ಟಿಸಿಯ ಹೊಸ ಬಸ್ಸಿನಲ್ಲಿ ಅಂಗವಿಕಲರೂ ಸಹ ವೀಲ್ಚೇರ್ನೊಂದಿಗೆ ಬಸ್ ಏರುವಂತಹ ಱಂಪ್ ಇದೆ.ಇದಕ್ಕೆ ಮಿಡಿ ಎಂಬ ಹೆಸರಿಟ್ಟಿದ್ದು, ಇದುವರೆಗೂ ನಮ್ಮ ರಾಜ್ಯದ ಜನ ಕಂಡು ಕೇಳರಿಯದ ವ್ಯವಸ್ಥೆಗಳು ಈ ಬಸ್ನಲ್ಲಿವೆ.
ನರ್ಮ್ ಮತ್ತು ಭೂಸಾರಿಗೆ ನಿರ್ದೇಶನಾಲಯ ಸಹಯೋಗದೊಂದಿಗೆ ಖರೀದಿಸಲಾದ ಈ ಬಸ್ನ ಬೆಲೆ 27.5 ಲಕ್ಷ ರೂ. ಒಟ್ಟು 737 ಬಸ್ಗಳು ಮುಂದಿನ ತಿಂಗಳ ಆರಂಭದಲ್ಲಿ ಕಾರ್ಯಾಚರಣೆಗಿಳಿಯಲಿವೆ.
ಈ ಬಸ್‌ಗಳಲ್ಲಿ ಇಂಟಲಿಜೆನ್ಸ್ ಟ್ರಾನ್ಸ್ಪೋರ್ಟ್ ಸಿಸ್ಟಂ ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಹಾಗೂ ತುರ್ತು ಸಂದರ್ಭಕ್ಕೆಂದೇ ಪ್ಯಾನಿಕ್ ಬಟನ್ ಇದೆ. ಈ ಬಟನ್ ಅದುಮಿದರೆ ಹತ್ತಿರದ ಕಂಟ್ರೋಲ್ ರೂಂಗೆ ಕೂಡಲೇ ಮಾಹಿತಿ ತಲುಪುತ್ತದೆ. ಪ್ರಯಾಣಿಕ ಬಸ್ನಿಂದ ಇಳಿಯ ಬೇಕೆಂದಾದದಲ್ಲಿ ಅದಕ್ಕೂ ಬಸ್ನ ಕಂಬಗಳಲ್ಲಿ ಸ್ಟಾಪರ್ ಬಟನ್ ಇದೆ. ಇನ್ನು ಬಸ್ನ ಒಳಗ ಹೊರಗೆ ಸಿಸಿಟಿವಿ, ಜಿಪಿಎಸ್ ಹಾಗೂ ಮುಂದಿನ ಸ್ಟಾಪ್ ಯಾವುದು ಅನ್ನೋದು ಅನೌಂಸ್ ಆಗುತ್ತೆ. ಸ್ವಯಂ ಚಾಲಿತ ಬಾಗಿಲುಗಳು, ಅಗ್ನಿ ಆಕಸ್ಮಿಕ ಉಪಕರಣಗಳು, ರೂಫ್ ವೆಂಟಿಲೇಟರ್ಗಳು ಹಾಗೂ ಅಂಗವಿಕಲಿಗಾಗಿ ಱಂಪ್ ಇದೆ.
ಮಿಡಿ ಬಸ್ಗಳು ಸಾಮಾನ್ಯ ಬಸ್ಗಳಿಂತ ಚಿಕ್ಕವಾಗಿದ್ದು, ಮಿನಿ ಬಸ್ಗಳಿಗಿಂತ ದೊಡ್ಡವು. ಒಂದು ಮಾದರಿ 30 ಆಸನಗಳನ್ನೊಳಗೊಂಡಿದ್ರೆ ಇನ್ನೊಂದು 40 ಆಸನ ಹೊಂದಿದ್ದು. ಕಿರಿದಾದ ರಸ್ತೆಯಲ್ಲೂ ಸುಲಭವಾಗಿ ಸಂಚರಿಸುತ್ತವೆ. ಸದ್ಯ ಕೆಂಗೇರಿಯ ಕೆಎಸ್ಆರ್ಟಿಸಿಯಲ್ಲಿ ನಿಂತಿರುವ ಈ ಬಸ್ ಮುಂದಿನ ತಿಂಗಳಿಂದ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಬೆಂಗಳೂರಿನ ಹೊರ ವಲಯದಲ್ಲಿ ಸಂಚರಿಸುವ ಈ ಬಸ್ ದರ ಪ್ರತಿ ಹಂತಕ್ಕೆ ಕೇವಲ 5 ರೂ. ನಿಗಧಿಗೊಳಿಸಲಾಗಿದೆ. ಒಟ್ಟಾರೆ ಇಂತಹ ಸುವ್ಯವಸ್ಥಿತ ಅತ್ಯಾಧುನಿಕ ಬಸ್ ಕನ್ನಡಿಗರಿಗಂತೂ ಹೊಸದೇ.

Comments are closed.