
ಗರ್ಭಿಣಿಯಾಗುವುದು ಮತ್ತು ತಾಯ್ತನದ ಸುಖ ಅನುಭವಿಸುವುದು ಪ್ರತಿ ಮಹಿಳೆಯ ಜೀವನದಲ್ಲಿ ಪ್ರಮುಖ ಅಂಶವಾಗಿರುತ್ತದೆ. ಗರ್ಭಿಣಿಯಾದ ವೇಳೆ ಭ್ರೂಣವನ್ನು ಮಹಿಳೆಯರಲ್ಲಿ ಆಗುವ ಬದಲಾವಣೆಗಳು, ಆರೋಗ್ಯದ ಏರುಪೇರು ಮತ್ತು ಮಗುವಿನ ಬೆಳವಣಿಗೆಯ ಕುರಿತು ಕಾಲಕಾಲಕ್ಕೆ ಪರೀಕ್ಷಿಸಬೇಕಿರುತ್ತದೆ.
ಜತೆಗೆ ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆಯ ಸಂದರ್ಭ ಮಗುವಿನ ಬೆಳವಣಿಗೆಯಲ್ಲಿ ಏನಾದರೂ ಲೋಪ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಅದನ್ನು ಗುಣಪಡಿಸಬಹುದು. ಈ ರೀತಿಯಲ್ಲಿ ಮಗುವಿನ ಬೆಳವಣಿಗೆಯನ್ನು ಕಾಲಕಾಲಕ್ಕೆ ಪರೀಕ್ಷಿಸಲು ಅನುಕೂಲವಾಗುವಂತೆ ಪೋಲೆಂಡ್ನ ತಜ್ಞರು ಪ್ರೆಗ್ನಾಬಿಟ್ ಎಂಬ ಉಪಕರಣವನ್ನು ತಯಾರಿಸಿದ್ದಾರೆ.
ಈ ಉಪಕರಣವನ್ನು ಬೆಲ್ಟ್ನಂತೆ ಗರ್ಭಿಣಿ ಮಹಿಳೆಯು ತನ್ನ ಹೊಟ್ಟೆಯ ಸುತ್ತ ಧರಿಸಬೇಕು. ಅದು ಸುಮಾರು 30 ನಿಮಿಷಗಳ ಕಾಲ ವಿವಿಧ ರೀತಿಯ ಪರೀಕ್ಷೆಗಳನ್ನು ತಾಯಿ ಮತ್ತು ಮಗುವಿನ ಕುರಿತು ನಡೆಸುತ್ತದೆ. ಪ್ರತಿ ಬೆಳವಣಿಗೆ ಮತ್ತು ಚಲನೆಯನ್ನು ದಾಖಲಿಸುವ ಪ್ರೆಗ್ನಾಬಿಟ್ ಬಳಿಕ ದಾಖಲೆಗಳನ್ನು ಮೆಡಿಕಲ್ ಟೆಲಿ ಮಾನಿಟರಿಂಗ್ ಕೇಂದ್ರಕ್ಕೆ ಕಳುಹಿಸುತ್ತದೆ. ಅಲ್ಲಿನ ತಜ್ಞವೈದ್ಯರು ಪರೀಕ್ಷಾ ವರದಿಯನ್ನು ಪರಾಮಶಿಸಿ ಸೂಕ್ತ ಫಲಿತಾಂಶ ನೀಡುತ್ತಾರೆ.
Comments are closed.