ಡಬ್ಲ್ಯೂಡಬ್ಲ್ಯೂಈ ಸ್ಟಾರ್ ಜಾನ್ ಸೆನಾ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿರಾಟ್ ಕೊಹ್ಲಿ! ಡಬ್ಲ್ಯೂಡಬ್ಲ್ಯೂಈ ಸ್ಟಾರ್ ಜಾನ್ ಸೆನಾ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿರಾಟ್ ಕೊಹ್ಲಿ!
ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ನ ಸ್ಟಾರ್ ಜಾನ್ ಸೆನಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಚಿತ್ರವನ್ನು ಹಾಕಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿದೆ.
ಡಬ್ಲ್ಯೂಡಬ್ಲ್ಯೂಇ ನಲ್ಲಿ 15 ಬಾರಿ ಚಾಂಪಿಯನ್ ಆಗಿರುವ ಜಾನ್ ಸೆನಾ, ಅಮೆರಿಕದಲ್ಲಿ ಅತ್ಯಂತ ಕಡಿಮೆ ಜನಪ್ರಿಯತೆ ಹೊಂದಿರುವ ಕ್ರಿಕೆಟ್ ಕ್ರೀಡಾ ಪಟುವಿನ ಫೋಟೋ ಅಪ್ ಡೇಟ್ ಮಾಡಿದ್ದು, ಅಭಿಮಾನಿಗಳು ಚಕಿತರಾಗಿದ್ದಾರೆ. ಬ್ಲೂ ಜರ್ಸಿ ತೊಟ್ಟಿರುವ ವಿರಾಟ್ ಕೊಹ್ಲಿಯ ಚಿತ್ರವನ್ನು ಜಾನ್ ಸೆನಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ಮುಂಬರುವ ಭಾರತ- ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಜಾನ್ ಸೆನಾ ಭಾರತಕ್ಕೆ ಬೆಂಬಲ ನೀಡಲು ಈ ಚಿತ್ರವನ್ನು ಅಪ್ ಡೇಟ್ ಮಾಡಿದ್ದಾರೆ ಎಂದು ಹಲವು ಅಭಿಮಾನಿಗಳು ಅಂದಾಜಿಸಿದ್ದರೆ,
ಇನ್ನು ಕೆಲವರು ಜಾನ್ ಸೆನಾ ತಮ್ಮ ಇತ್ತೀಚಿನ ಸ್ಮೇಕ್ ಡೌನ್( ಅಧಿಕೃತ ಬಣ್ಣ ನೀಲಿ)ಯನ್ನು ತಿಳಿಸಲು ಬ್ಲೂ ಜರ್ಸಿ ಧರಿಸಿರುವ ವಿರಾಟ್ ಕೊಹ್ಲಿಯ ಚಿತ್ರವನ್ನು ಹಾಕಿದ್ದಾರಾ ಎಂದು ಗೊಂದಲಕ್ಕೀಡಾಗಿದ್ದಾರೆ. ಜಾನ್ ಸೆನಾ ಅಪ್ ಡೇಟ್ ಮಾಡಿರುವ ಚಿತ್ರಕ್ಕೆ ಇನ್ಸ್ಟಾಗ್ರಾಮ್ ನಲ್ಲಿ 38,800 ಲೈಕ್ ಗಳು ಬಂದಿವೆ. ಆದರೆ ಈ ವರೆಗೂ ವಿರಾಟ್ ಕೊಹ್ಲಿ ಜಾನ್ ಸೆನಾ ಪ್ರತಿಕ್ರಿಯೆ ನೀಡಿಲ್ಲ.
Comments are closed.