ಕರ್ನಾಟಕ

ವಾಹನಗಳ ಮಧ್ಯೆ ಡಿಕ್ಕಿ: 3 ಮಂದಿ ಸಾವು

Pinterest LinkedIn Tumblr

21accidentclrರಾಮನಗರ, ಜು.೨೧: ಬೆಂಗಳೂರು-ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ ಬಳಿ ಟಾಟಾಸುಮೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿರುವ ಮೂರು ಮಂದಿ ದುರ್ಮರಣ ಹೊಂದಿರುವ ಘಟನೆ ನಡೆಸಿದೆ.

ಮೃತಪಟ್ಟ ಬೈಕ್‌ನಲ್ಲಿದ್ದವರು ರಾಮನಗರ ನಾಲಬಂದವಾಡಿ ವಾಸಿ ತನ್ವೀರ್(೨೫), ಇಬ್ಬರು ಚನ್ನಪಟ್ಟಣ ವಾಸಿಗಳಾದ ಜಹೀರ್ ಅಲಿ(೧೮), ನೌಶಾದ್(೧೯) ಎಂದು ಗುರುತಿಸಲಾಗಿದೆ. ಈ ಮೂವರು ಬಿಡದಿ ಕಡೆಯಿಂದ ರಾಮನಗರದ ಕಡೆ ಬರುವಾಗ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ರಾಮನಗರ ಕಡೆಯಿಂದ ಹೊರಟ ಟಾಟಾಸುಮೋ ಚಾಲಕನ ಅತಿವೇಗ ಅಜಾಗರೂಕತೆಯಿಂದ ಚಲಿಸಿ ರಸ್ತೆಯ ವಿಭಜಕವನ್ನು ದಾಟಿ ಬಿಡದಿ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಬರುತ್ತಿದ್ದ ಈ ಮೂವರು ಮೃತಪಟ್ಟಿದ್ದಾರೆ ಎಂದು ಸಂಚಾರಿ ಪೊಲೀಸ್ ಠಾಣೆ ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

Comments are closed.