ಕುಂದಾಪುರ: ವಿವಾಹಿತ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕುಂದಾಪುರದ ಅಂಕದಕಟ್ಟೆಯ ಪವಿತ್ರಾ (24) ಎಂಬಾಕೆಗೆ ಮದುವೆಯಾಗಿ ಮಗುವಿದ್ದು ಆಕೆ ಕಳೆದ ನಾಲ್ಕೈದು ದಿನದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆ ಪತಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಮಹಿಳೆಯ ಶೋಧಕ್ಕಾಗಿ ಬಲೆ ಬೀಸಿದ ಪೊಲೀಸರು ವಿವಾಹಿತ ಮಹಿಳೆಯನ್ನು ಹಾಗೂ ಆಕೆಯ ಪ್ರಿಯಕರನನ್ನು ಬೆಂಗಳೂರಿನಿಂದ ಕುಂದಾಪುರ ಠಾಣೆಗೆ ಕರೆತಂದಿದ್ದಾರೆ.

(ಪವಿತ್ರಾ ಹಾಗೂ ಆಕೆ ಪ್ರಿಯಕರ ಮೋಹಿತ್)
ಕುಂದಾಪುರ ತಾಲೂಕಿನ ಆರ್ಡಿಯ ಕೊಂಜಾಡಿ ಮೂಲದ ಪವಿತ್ರಾ ಕಳೆದ ಏಳೂವರೆ ವರ್ಷದ ಹಿಂದೆ ಅಂಕದಕಟ್ಟೆಯ ನಿವಾಸಿಯೊಬ್ಬನೊಂದಿಗೆ ಪ್ರೀತಿಸಿ ವಿವಾಹವಾಗಿದ್ದಳು. ಇಬ್ಬರಿಗೂ ಐದೂವರೆ ವರ್ಷ ಪ್ರಾಯದ ಹೆಣ್ಣುಮಗುವಿತ್ತು. ಜುಲೈ15ರಂದು ಪವಿತ್ರಾ ಯಾರಿಗೂ ತಿಳಿಸದೇ ಮನೆಯಿಂದ ಕಾಣೆಯಾಗಿದ್ದು ಆಕೆ ಪತಿ ಕುಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ದೂರಿನನ್ವಯ ಆಕೆಯ ಪತ್ತೆಗಿಳಿದ ಪೊಲೀಸರು ಕಾರ್ಯಾಚರಣೆ ನಡೆಸುವಾಗ ಆಕೆ ಬೆಂಗಳೂರಿನಲ್ಲಿ ತನ್ನ ಪ್ರಿಯಕರನೊಂದಿಗಿರುವುದು ತಿಳಿದುಬಂದಿತ್ತು. ಪ್ರಿಯಕರನನ್ನು ಆರ್ಡಿಯ ಕೊಳಲಾಡಿ ಸಮೀಪದ ನಿವಾಸಿ ಮೋಹಿತ್ ಶೆಟ್ಟಿ(24) ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ಸಂಜೆ ಮಹಿಳೆ ಬ್ಯಾಂಕಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದವರು ನಾಪತ್ತೆಯಾಗುತ್ತಾರೆ.ಇತ್ತ ಯ್ವಿವಾಹಿತೆ ನಾಪತ್ತೆಯಾಗಿದ್ದರೇ ಅತ್ತ ಆಕೆ ಪ್ರಿಯಕರ ಮೋಹಿತ್ ನಾಪತ್ತೆ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ನಾಪತ್ತೆ ಬೆನ್ನು ಹತ್ತಿದ ಕುಂದಾಪುರ ಪೊಲೀಸರು ಇಬ್ಬರನ್ನು ಬೆಂಗಳೂರಿನ ಹೆಬ್ಬಾಳದ ಮನೆಯೊಂದರಲ್ಲಿ ಪತ್ತೆ ಮಾಡುತ್ತಾರೆ. ಆರೋಪಿ ಮೋಹಿತ್ ಶೆಟ್ಟಿ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳವನೆನ್ನಲಾಗಿದ್ದಾನೆನ್ನಲಾಗಿದೆ. ಬೆಂಗಳೂರಿಗೆ ಕರೆದೊಯ್ದ ಆತ ಪವಿತ್ರಾಳ ಕರಿಮಣಿ ಸರವನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ.
ಕುಂದಾಪುರಕ್ಕೆ ಕರೆತಂದ ಸಂದರ್ಭ ಮಹಿಳೆಯ ಗಂಡನ ಮನೆಯವರು ಯಾವುದೇ ಕಾರಣಕ್ಕೂ ಬೇರೊಬ್ಬನ ಜೊತೆಗೆ ಹೋದಾಕೆ ನಮ್ಮ ಜೊತೆ ಬರುವುದು ಬೇಡ. ವಿಚ್ಚೇದನ ನೀಡಿ ಅವಳಿಗೆ ಇಷ್ಟವಾದವನ ಜೊತೆ ಹೋಗಲಿ ಎಂದಿದ್ದಾರೆ. ಇತ್ತ ಆಕೆಯ ತಾಯಿಯ ಮನೆಯವರೂ ಅದೇ ರೀತಿಯ ಹೇಳಿಕೆ ನೀಡಿದ್ದು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ಇತ್ತ ಆರೋಪಿಯೂ ನ್ಯಾಯಾಲಯದಲ್ಲಿ ಹಾಜರಾಬೇಕಾಗಿರುವುದರಿಮದ ವಿವಾಹಿತ ಮಹಿಳೆಯನ್ನು ತಾತ್ಕಾಲಿಕ ವಸತಿಗಾಗಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿರಿ:
ಕುಂದಾಪುರ: ವಿವಾಹಿತ ಮಹಿಳೆ ನಾಪತ್ತೆ
Comments are closed.