ಅಂತರಾಷ್ಟ್ರೀಯ

ಚೀನಾದಲ್ಲೋಂದು “ಲವ್ ಟ್ರೈನಿಂಗ್” ಕಾಲೇಜು

Pinterest LinkedIn Tumblr

CHINA-LOVE-LESSONS

ಬೀಜಿಂಗ್: ಭಾರತದಲ್ಲಿ ಮಕ್ಕಳು ಕಾಲೇಜಿಗೆ ಹೊರಟರೆಂದರೆ ಪೋಷಕರು ಪ್ರೀತಿ-ಪ್ರೇಮ ಎಂದು ತಲೆಕೆಡಿಸಿಕೊಳ್ಳಬೇಡ ಎಂದು ಬುದ್ದಿ ಹೇಳುತ್ತಾರೆ. ಇನ್ನು ಕಾಲೇಜಿನಲ್ಲೂ ಇದರ ಬಗ್ಗೆ ಕೆಲ ಉಪನ್ಯಾಸಕರು ಬುದ್ದಿ ಹೇಳುವುದು ಸಾಮಾನ್ಯ.

ಆದರೆ ಚೀನಾದ ವಿಶ್ವವಿದ್ಯಾಲಯವೊಂದರಲ್ಲಿ ಪ್ರೀತಿ ಮಾಡುವುದು ಹೇಗೆ ಎಂಬ ವಿಷಯವನ್ನೇ ಪಠ್ಯದಲ್ಲಿ ಅಳವಡಿಸಿದೆ. ಚೀನಾದ ಟಿಯಾಂಜಿನ್ ವಿಶ್ವವಿದ್ಯಾಲಯ ಎಲ್ಲಾ ವಿವಿಗಳಿಗಿಂಥ ಭಿನ್ನವಾಗಿ ಗುರುತಿಸಿಕೊಂಡಿದೆ. ಈ ವಿವಿಯಲ್ಲಿ ರೊಮ್ಯಾಂಟಿಕ್ ಸಂಬಂಧಗಳ ಥಿಯರಿ ಹಾಗೂ ಪ್ರಾಕ್ಟಿಕಲ್ ನಡೆಸಲಾಗುತ್ತದೆ. ಇದಕ್ಕೆ ಉಪನ್ಯಾಸಕರಿದ್ದು, ಹೇಗೆ ಪ್ರೀತಿ ಮಾಡಬೇಕು? ಒಬ್ಬರನ್ನೊಬ್ಬರು ಹೇಗೆ ಮಾತನಾಡಿಸಬೇಕು? ನಮ್ಮ ನಡವಳಿಕೆ ಹೇಗಿರಬೇಕು? ಎಂಬ ಕುರಿತು ಪಾಠ ಮಾಡಲಾಗುತ್ತದೆ.

ಚೀನಾದಲ್ಲಿ ಮೊದಲ ಬಾರಿಗೆ ವಿವಿಯೊಂದರಲ್ಲಿ ಈ ರೀತೀ ಪಠ್ಯಕ್ರಮ ಇಡಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆಯ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದರೆ ಚೀನಾದ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಇಂತಹ ವಿಭಿನ್ನ ಯೋಜನೆಗಳ ಅಗತ್ಯವಿದೆಯೇ ಎಂಬ ಮಾತೂ ಕೂಡಾ ಕೇಳಿ ಬರುತ್ತಿದೆ.

Comments are closed.