
ನವದೆಹಲಿ: ಭಾರತೀಯ ಸೀಮಿತ ಓವರ್ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಜಾಹೀರಾತಿನಲ್ಲಿ ಹಿಂದಿಕ್ಕಿದ್ದಾರೆ.
ಪ್ರಸಕ್ತ ವರ್ಷದ ಮೊದಲ ಆರು ತಿಂಗಳಲ್ಲಿ ಟಿವಿ ಜಾಹೀರಾತುಗಳಲ್ಲಿ ಧೋನಿ ಕಾಣಿಸಿಕೊಳ್ಳುವ ಮೂಲಕ ಅತಿ ಹೆಚ್ಚು ಜನರನ್ನು ತಲುಪಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಈ ಮೂಲಕ, ಕಳೆದ ವರ್ಷ ಈ ವಿಚಾರದಲ್ಲಿ ತಮ್ಮನ್ನು ಹಿಂದಿಕ್ಕಿದ್ದ ಕೊಹ್ಲಿಯನ್ನು ಧೋನಿ ಈ ವರ್ಷ ಹಿಂದಿಕ್ಕಿದ್ದಾರೆಂದು ಟಿವಿ ವೀಕ್ಷಕರ ಮಾಪನ (ಟಿಎಎಂ) ಸಂಸ್ಥೆಯಾದ ಆ್ಯಡೆಕ್ಸ್ ಇಂಡಿಯಾ ತಿಳಿಸಿದೆ.
ಜಾಹೀರಾತಿನ ದಿನವೊಂದರ ಶೂಟಿಂಗ್ಗಾಗಿ ಕೊಹ್ಲಿ ₹ 3 ಕೋಟಿ ಸಂಭಾವನೆ ಪಡೆಯುತ್ತಿದ್ದರೆ, ಧೋನಿ ₹ 1.5 ಕೋಟಿ ಪಡೆಯುತ್ತಾರೆ. ಹೀಗಾಗಿ, ಹೆಚ್ಚಿನ ಜಾಹೀರಾತು ಕಂಪನಿಗಳು ಧೋನಿ ಕಡೆಗೆ ವಾಲುತ್ತಿವೆ ಎಂದು ಆ್ಯಡೆಕ್ಸ್ ಸಮೀಕ್ಷೆ ಹೇಳಿದೆ.
Comments are closed.