ಕರ್ನಾಟಕ

ಭ್ರೂಣಪತ್ತೆ ಪರೀಕ್ಷೆಗೆ ಮುಂದಾದ ಖಾನ್ ದಂಪತಿಗಳು, ಬಿಟೌನ್’ನಲ್ಲಿ ಹರಿದಾಡುತಿದೆ ವದಂತಿ

Pinterest LinkedIn Tumblr

kareena

ನವದೆಹಲಿ ಜು.14 : ಬಾಲಿವುಡ್’ನ ಬೆಡಗಿ, ಮತ್ತೊಬ್ಬ ಸ್ಟಾರ್ ನಟ ಸೈಫ್ ಅಲಿ ಖಾನ್’ನ ಹೆಂಡತಿ ಕರೀನಾ ಕಪೂರ್ ಖಾನ್ ಮುಂದೆ ಜನಿಸುವ ಮುಗುವಿಗಾಗಿ ಭ್ರೂಣಪತ್ತೆ ಪರೀಕ್ಷೆಗೆ ಮುಂದಾಗಿದ್ದರೆ, ಇಂತಹದೊಂದು ಸುದ್ದಿ ಬಿಟೌನ್’ನಲ್ಲಿ ಹರಿದಾಡುತ್ತಿದೆ. ಆದರೆ ದಂಪತಿಗಳಿಬ್ಬರು ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ.

‘ಈ ವರದಿ ಸಂಪೂರ್ಣ ಆಧಾರ ರಹಿತ, ಈ ರೀತಿ ಯಾವುದೇ ಘಟನೆ ಘಟಿಸಿಲ್ಲ.ಲಂಡನಿನ್ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯರನ್ನು ಭೇಟಿಯಾಗಿಲ್ಲ. ಇದನ್ನು ಯಾರೊಬ್ಬರು ಹುಟ್ಟಿಹಾಕಿದ ಕಪೋಕಲ್ಪಿತ ಸುದ್ದಿ’ ಎಂದು 35 ವರ್ಷದ ಬಾಲಿವುಡ್ ನಟಿ ಕರೀನಾ ಸ್ಪಷ್ಟನೆ ನೀಡಿದ್ದಾರೆ.

‘ಕರೀನಾ ಹಾಗೂ ಸೈಫ್ ಇಬ್ಬರು ಪ್ರೌಢ ವಯಸ್ಕರು.ಅವರಿಗೆ ಕಾನೂನಿನ ಬಗ್ಗೆ ಅರಿವಿದೆ. ನಾವು ಪ್ರತಿಯೊಬ್ಬರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಅನಗತ್ಯವಾಗಿ ಇಲ್ಲಸಲ್ಲದ ಖಾಸಗಿ ವಿಷಯಗಳನ್ನು ಪ್ರಚಾರ ಮಾಡಬೇಡಿ’ ಎಂದು ಸೈಫ್ ವಕ್ತಾರರು ಸುದ್ದಿ ಮಾದ್ಯಮಗಳಿಗೆ ಮನವಿ ಮಾಡಿದ್ದಾರೆ.
ಸೈಫ್ ಹಾಗೂ ಕರೀನಾ ಲಂಡನ್’ನಲ್ಲಿ ವೈದ್ಯರನ್ನು ಭೇಟಿ ಮಾಡಿ ಭ್ರೂಣ ಪತ್ತೆ ಪರೀಕ್ಷೆ ಮಾಡಿಸಿದ್ದು, ಗಂಡು ಮಗ ಜನಿಸುತ್ತಾನೆ ಎಂಬ ವಿಷಯವನ್ನು ಅವರು ಖಚಿತಪಡಿಸಿಕೊಂಡಿದ್ದಾರೆ ಎಂದು’ ವದಂತಿಗಳು ಬಿಟೌನ್’ನಲ್ಲಿ ಹರಡುತ್ತಿವೆ.

ಪ್ರಸ್ತುತ ಕರೀನಾ ಕಪೂರ್ ‘ವೀರಾ ದಿ ವೆಡ್ಡಿಂಗ್’ ಎಂಬ ಚಿತ್ರದ ಶೂಟಿಂಗ್’ನಲ್ಲಿ ಬ್ಯುಸಿಯಾಗಿದ್ದು,ಅಕ್ಟೋಬರ್’ನಲ್ಲಿ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ನಂತರ ಅವರು ಯಾವುದೇ ಸಿನಿಮಾದಲ್ಲಿ ಪಾಲ್ಗೊಳ್ಳುವುದಿಲ್ಲ. ಡಿಸೆಂಬರ್’ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ.

Comments are closed.