ಕರಾವಳಿ

ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹ: ಎಬಿವಿಪಿ ನೇತೃತ್ವ ಕುಂದಾಪುರದಲ್ಲಿ ಪ್ರತಿಭಟನೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಇತ್ತೀಚೆಗೆ ನಡೆದ ಡಿವೈ‌ಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯಸರಕಾರದ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇರ ಕೈವಾಡವಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬುಧವಾರ ರಾಜ್ಯಾದ್ಯಂತ ಹೋರಾಟಕ್ಕೆ ಕರೆನೀಡಿದ್ದು ಕುಂದಾಪುರದಲ್ಲಿಯೂ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ABVP_Protest_Kundapura (21) ABVP_Protest_Kundapura (20) ABVP_Protest_Kundapura (22) ABVP_Protest_Kundapura (18) ABVP_Protest_Kundapura (17) ABVP_Protest_Kundapura (16) ABVP_Protest_Kundapura (15) ABVP_Protest_Kundapura (13) ABVP_Protest_Kundapura (19) ABVP_Protest_Kundapura (14) ABVP_Protest_Kundapura (9) ABVP_Protest_Kundapura (10) ABVP_Protest_Kundapura (11) ABVP_Protest_Kundapura (12) ABVP_Protest_Kundapura (23) ABVP_Protest_Kundapura (6) ABVP_Protest_Kundapura (4) ABVP_Protest_Kundapura (5) ABVP_Protest_Kundapura (7) ABVP_Protest_Kundapura (2) ABVP_Protest_Kundapura (1) ABVP_Protest_Kundapura (3) ABVP_Protest_Kundapura (8)

ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸವನ್ನು ನಿರ್ವಹಿಸಲು ಅನುಕೂಲ ಕಲ್ಪಿಸಬೇಕಾದ ಸರಕಾರ ಪ್ರಾಮಾಣಿಕ ಅಧಿಕಾರಿಗಳನ್ನು ಒತ್ತಡದಲ್ಲಿ ಸಿಲುಕಿಸಿ ವರ್ಗಾವಣೆ ಮೊದಲಾದ ವಿಚಾರಗಳ ಮೂಲಕ ನೈತಿಕವಾಗಿ ಹಿಂಸೆ ನೀಡುತ್ತಿದೆ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಒತ್ತಡ ಹಾಗೂ ಕಿರುಕುಳಗಳ ಮೂಲಕ ಕೆಲಸ ಮಾಡದಂತೆ ನಡೆಸಿಕೊಳ್ಳುತ್ತಿದ್ದಾರೆ. ಒಂದಷ್ಟು ಸಚಿವರು ಅಧಿಕಾರ ಹಾಗೂ ಹಣದ ಅಮಲಿನಲ್ಲಿ ಪೊಲೀಸರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಡಿವೈ‌ಎಸ್ಪಿ ಎಂ.ಕೆ. ಗಣಪತಿ ಅವರ ಪತ್ನಿ ಹಾಗೂ ಪುತ್ರ ನೀಡಿರುವ ಎರಡು ಪ್ರತ್ಯೇಕ ದೂರುಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಬೇಕು. ಪ್ರಕರಣದಲ್ಲಿ ಕೆಲವು ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಪಾತ್ರವಿರುವುದು ಕಂಡುಬರುತ್ತಿದ್ದು ಈ ಕೇಸನ್ನು ಸಿ.ಬಿ.ಐ.ಗೆ ವಹಿಸುವುದು ಸೂಕ್ತ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನಿಂದ 1300 ವಿದ್ಯಾರ್ಥಿಗಳು ಬ್ರಹತ್ ಮೆರವಣಿಗೆ ಮೂಲಕ ಸಾಗಿ ಬಂದು ಕುಂದಾಪುರ ಮಿನಿವಿಧಾನಸೌಧದದ ಎದುರು ಕೆಲಕಾಲ ಪ್ರತಿಭಟಿಸಿದರು. ಅಲ್ಲದೇ ಕುಂದಾಪುರದ ವಿಶೇಷ ತಹಶಿಲ್ದಾರ್ ಕಿರಣಕುಮಾರ್ ಅವರಿಗೆ ಮನವಿ ನೀಡಿದರು.

ಪ್ರತಿಭಟನೆ ಮುಂದಾಳತ್ವವನ್ನು ವೈಭವ್, ಪುನೀತರಾಜ್ ಶೆಟ್ಟಿ, ನವೀನ್ ರಾಜ್, ದೀಕ್ಷಿತ್, ಗೌತಮ್, ಸುಹಾಸ್, ಸಚಿನ್ ಪೂಜಾರಿ, ಸನತ್, ಪ್ರದೀಪ್ ಸುದರ್ಶನ್, ಸುಶಾಂತ್, ನಾಗರಾಜ್ ಪೂಜಾರಿ ಮೊದಲಾದವರು ವಹಿಸಿದ್ದರು.

Comments are closed.