
ಬೆಂಗಳೂರು: ಪ್ರೀಮಿಯರ್ ಫುಟ್ಸಾಲ್ ಜೊತೆಗೆ ದೀರ್ಘ ಕಾಲದ ಒಪ್ಪಂದಕ್ಕೆ ಸಹಿ ಹಾಕಿರುವ ಕನ್ನಡ ಜನಪ್ರಿಯ ನಟ ಪುನೀತ್ ರಾಜಕುಮಾರ್, ಬೆಂಗಳೂರು ತಂಡದ ಫ್ರಾಂಚೈಸ್ ಪಡೆದಿರುವುದು ಸೋಮವಾರ ಘೋಷಣೆಯಾಗಿದೆ.
ಒಳಾಂಗಣ ಕ್ರೀಡಾಂಗಣದಲ್ಲಿ ಆಡುವ ಐದು ಜನ ತಂಡದ ಈ ಫುಟ್ಬಾಲ್ ಆಟ ಫುಟ್ಸಾಲ್ ಎಂದೇ ಪ್ರಖ್ಯಾತ. ಇದರ ಬಗ್ಗೆ ಅರಿವು ಮೂಡಿಸಲು ಈ ಸರಣಿ ಜವಳಿ 15 ರಿಂದ 26 ರವರೆಗೆ ನಡೆಯಲಿದೆ.
ಇದು ಮೊದಲ ಬಾರಿಗೆ ಸರಣಿ ರೂಪದಲ್ಲಿ ಭಾರತದಲ್ಲಿ ಪ್ರಾರಂಭವಾಗುತ್ತಿದ್ದು, ಪ್ರೀಮಿಯರ್ ಫುಟ್ಸಾಲ್, ಫುಟ್ಬಾಲ್ ಮತ್ತು ಫುಟ್ಸಾಲ್ ಆಟಗಾರರನ್ನು ಒಟ್ಟಿಗೆ ತರಲಿದೆ.
ಮೊತ್ತವನ್ನು ಸಾರ್ವಜನಿಕಗೊಳಿಸದಿದ್ದರು, ಬೆಂಗಳೂರು ತಂಡ ಮೂರನೇ ಫ್ರಾಂಚೈಸ್ ಆಗಿ ಪುನೀತ್ ರಾಜಕುಮಾರ್ ಅವರು ಕೊಂಡಿದ್ದಾರೆ. “ಬೆಂಗಳೂರು ಹೊಸ ಆಟವನ್ನು ಬಹಳ ಆಸಕ್ತಿಯಿಂದ ಬರಮಾಡಿಕೊಳ್ಳುತ್ತಿದೆ. ಬೆಂಗಳೂರಿನ ಯುವಕರ ಕಲ್ಪನೆಯನ್ನು ಈ ವೇಗದ ಆಟ ಹಿಡಿದಿಡಲಿದೆ” ಎಂದಿದ್ದಾರೆ ಪುನೀತ್. ಬೆಂಗಳೂರ್ ಫ್ರಾಂಚೈಸ್ ಗೆ ಬೆಂಗಳೂರು 5s ಎಂದು ಕರೆಯಲಾಗಿದೆ.
Comments are closed.