
ಮಂಡ್ಯ: ಕನ್ನಡದ ತಿಥಿ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಇದೇ ಸಿನಿಮಾದ ಕ್ಯಾರೆಕ್ಟರ್ ಗಡ್ಡಪ್ಪ ಸಖತ್ ಫೇಮಸ್ ಆಗಿದ್ದಾರೆ. ಆದ್ರೆ ಇವರಿಗೆ ಇರೋಕೆ ಮಾತ್ರ ಒಂದು ಸರಿಯಾದ ಸೂರಿಲ್ಲ.

ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದ ಚನ್ನೇಗೌಡ(ಗಡ್ಡಪ್ಪ) ತೆಂಗಿನ ಗರಿಯಲ್ಲಿ ನಿರ್ಮಿಸಿದ ಗುಡಿಸಿಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಮಳೆ ಬಂತಂದ್ರೆ ಆ ದಿನ ನರಕಯಾನತೆ. ಚನ್ನೇಗೌಡರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಎಲ್ಲರನ್ನ ಮದುವೆ ಮಾಡಿ ಕೊಟ್ಟಿದ್ದಾರೆ.
ಕೆಲದಿನಗಳ ಹಿಂದೆ ಗಡ್ಡಪ್ಪ ಅನಾರೋಗ್ಯದಿಂದ ಬಳಲುತಿದ್ದಾಗ ತಿಥಿ ಸಿನಿಮಾ ತಂಡ ಆಸ್ಪತ್ರೆ ವೆಚ್ಚ ಭರಿಸಿ, ಒಂದಷ್ಟು ಹಣವನ್ನೂ ನೀಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಗಡ್ಡಪ್ಪ ಈಗ ಸರ್ಕಾರ ಮತ್ತು ಸಾರ್ವಜನಿಕರು ತಮ್ಮ ನೆರವಿಗೆ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
Comments are closed.