ಚಂಡೀಗಢ: ಇತ್ತೀಚಿನ ವರ್ಷಗಳಲ್ಲಿ ಭಾರತ ಏಡ್ಸ್ ಸಾಮ್ರಾಜ್ಯವಾಗುವತ್ತ ಮುನ್ನಡೆಯುತ್ತಿದ್ದು, ಎಚ್ಐವಿ ಪೀಡಿತರ ಸಂಖ್ಯೆ 21 ಲಕ್ಷಕ್ಕೆ ಏರಿದೆ.! ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ ಅಂಶ ಬೆರಗು ಮೂಡಿಸಿದ್ದು, ದೇಶದ 7 ಲಕ್ಷ ಜನ ಎಚ್ಐವಿ ಪೀಡಿತರಿಗೆ ಕಾಯಿಲೆ ಬಗ್ಗೆ ಮಾಹಿತಿಯೇ ಇಲ್ಲ. ಅವರಲ್ಲಿ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ತೀವ್ರ ಯತ್ನ ನಡೆಯುತ್ತಿವೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯ (ನಾಕೋ) ಮಹಾ ನಿರ್ದೇಶಕ ನವರೀತ್ ಸಿಂಗ್ ಹೇಳಿದ್ದಾರೆ.
ಜೈಲುಗಳಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಎಚ್ಐವಿ ನಿಯಂತ್ರಣ ರಣನೀತಿಯನ್ನು’ ನಾಕೋ ಜಾರಿಗೆ ತಂದಿದೆ. ಈ ಮೂಲಕ ದೇಶದಲ್ಲಿ ಸೋಂಕು ನಿಯಂತ್ರಣ ಮತ್ತು ಏಡ್ಸ್ ಪೀಡಿತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ದೇಶದ ಜೈಲುಗಳಲ್ಲಿರುವ ಕೈದಿಗಳಲ್ಲಿ ಅರ್ಧದಷ್ಟು ಜನರಿಗೆ ಎಚ್ಐವಿ ಸೋಂಕು ಇರುವ ಶಂಕೆ ಇದೆ. 8 ರಾಜ್ಯದ ಜೈಲುಗಳಲ್ಲಿ ಎಚ್ಐವಿ ಸೋಂಕು ನಿಯಂತ್ರಣ ಆಂದೋಲನ ಫೆಬ್ರವರಿಯಿಂದ ಜಾರಿಗೊಂಡಿದ್ದು, ಉಳಿದ ರಾಜ್ಯಗಳಲ್ಲೂ ಶೀಘ್ರ ಜಾರಿಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
Comments are closed.