ಅಂತರಾಷ್ಟ್ರೀಯ

ನೀಲಿಮಯ: ನಗ್ನವಾಗಿ ಒಂದೆಡೆ ಸೇರಿದ 3 ಸಾವಿರಕ್ಕೂ ಹೆಚ್ಚುಮಂದಿ !!!

Pinterest LinkedIn Tumblr

landonಲಂಡನ್‌ : ಬ್ರಿಟನ್‌ನಲ್ಲಿ ಯಾವ್ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೋ ಊಹಿಸುವುದು ಆಸಾಧ್ಯ . ಹುಲ್‌ ಸಿಟಿಯಲ್ಲಿ ನಡೆದ ಸಂಪೂರ್ಣ ನೀಲಿ ಮಯವಾಗಿದ್ದ ಈ ಇವೆಂಟ್‌ನಲ್ಲಿ ವಿಶ್ವದ ವಿವಿಧ ದೇಶಗಳಿಂದ ಬಂದಿದ್ದ 3,200 ಮಂದಿ ಕಲಾ ರಸಿಕರು ಸಂಪೂರ್ಣ ನಗ್ನವಾಗಿ ಮೈಗೆ ನೀಲಿ ಬಣ್ಣ ಬಳಿದುಕೊಂಡು ಬೀದಿಯಲ್ಲಿ ಮೆರವಣಿಗೆ ಸಾಗಿದರು.

‘ಹುಲ್‌ ಸೀ ‘ಎಂಬ ಹೆಸರಿನಲ್ಲಿ ಆಯೋಜಿಸಲಾದ ವರ್ಣರಂಜಿತ ಕಾರ್ಯಕ್ರಮದಲ್ಲಿ 20 ದೇಶಗಳ ಜನರು ಲಿಂಗಭೇದ,ವಯೋ ಭೇದವಿಲ್ಲದೆ ನಗ್ನವಾಗಿ ಪಾಲ್ಗೊಂಡು ನಗರದ ವಿವಿಧ ಹೆಗ್ಗುರುತುಗಳ ಮುಂದೆ ಮೆರವಣಿಗೆ ಸಾಗಿ, ವಿಭಿನ್ನ ಭಂಗಿಗಳಲ್ಲಿ ಮಲಗಿ ,ಕುಳಿತು ಫೋಟೋಗಳಿಗೆ ಪೋಸ್‌ ನೀಡಿದ್ದು ವಿಶೇಷವಾಗಿತ್ತು.

ನೂರಾರು ಸ್ವಯಂ ಸೇವಕರು ಪಾಲ್ಗೊಂಡವರ ಮೈಗೆ ನಾಲ್ಕು ವಿಭಿನ್ನ ಶೇಡ್‌ಗಳಲ್ಲಿ ನೀಲಿ ಬಣ್ಣವನ್ನು ಬಳಿದರು. ನೀರಿನ ಸಂಕೇತವಾಗಿ ನೀಲಿ ಬಣ್ಣವನ್ನು ಬಳಸಿಕೊಳ್ಳಲಾಗಿತ್ತು.

ಅಚ್ಚರಿಯೆಂದರೆ ಬ್ರಸೆಲ್ಸ್‌ನ 80 ವರ್ಷದ ವೃದ್ಧನೂ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು, ‘ನಾವು ನೀಲಿ ಬಣ್ಣದಲ್ಲಿ ಮುಳುಗಿದ್ದ ಕಾರಣ ಯಾವುದೇ ಲಿಂಗ ಭೇದ ಕಾಣಲಿಲ್ಲ. ಎಲ್ಲರೂ ಬೆತ್ತಲಾಗಿದ್ದ ರಿಂದ ಸಮಾನತೆಯನ್ನು ಕಂಡುಕೊಂಡಿದ್ದೇವೆ’ ಎಂದಿದ್ದಾನೆ.
-ಉದಯವಾಣಿ

Comments are closed.