ಮನೋರಂಜನೆ

ಆಭರಣ ಕಳೆದುಕೊಂಡ ನಟಿ ಸೋನಲ್ ಚೌಹಾಣ್

Pinterest LinkedIn Tumblr

soಮುಂಬೈ: ಬಾಲಿವುಡ್ ನಟಿ ಸೋನಲ್ ಚೌಹಾಣ್ ಲಕ್ ಸರಿಯಾಗಿಲ್ಲ ಅನ್ನಿಸುತ್ತದೆ. ಯಾಕಂದ್ರೆ ಸೋನಲ್ ಮೊನ್ನೆ ತಾನೇ ಸಿಂಗಾಪುರಕ್ಕೆ ಟ್ರಿಪ್‌ಗೆ ತೆರಳಿದ್ದರು. ಸಿಂಗಾಪುರನಲ್ಲಿ ಪ್ರಶಸ್ತಿ ಸಮಾರಂಭಕ್ಕೆಂದು ಹಾಜರಾಗಿದ್ದ ವೇಳೆ ಚೌಹಾಣ್ ಧರಿಸಿದ್ದ ಆಭರಣಗಳನ್ನು ಯಾರೋ ಕಳ್ಳತನ ಮಾಡಿದ್ದಾರಂತೆ.

ಪ್ರಶಸ್ತಿ ಸಮಾರಂಭದ ವೇಳೆ ಸೋನಲ್ ಅವರು ಆಭರಣ ಕಳ್ಳತನವಾಗಿವೆ ಎಂದು ನಟಿಯೇ ತಿಳಿಸಿದ್ದಾರೆ. ಅದಾದ ಬಳಿಕ ಮುಂಬೈಗೆ ಸೋನಲ್ ವಾಪಸ್ಸಾಗಿದ್ದಾರೆ. ತಮ್ಮಗೆ ಮುಖ್ಯವಾಗಿರುವ ಆಭರಣಗಳನ್ನು ಯಾರಾದರೂ ವಾಪಸ್ ತಂದುಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸೋನಲ್ ಕುಳಿತಿದ್ದಾಳೆ.

ಇದೇ ಮೊದಲ ಬಾರಿಗೆ ಸೋನಲ್ ತನ್ನ ಆಭರಣ ಕಳೆದುಕೊಂಡಿಲ್ಲ. ಈ ಮೊದಲು ಅಂದ್ರೆ ಕಳೆದ ವರ್ಷ ಸೋನಲ್ ಮುಂಬೈ ನಿವಾಸಕ್ಕೆ ಬಂದಿದ್ದ ಕಳ್ಳರು ಮನೆ ಬಾಗಿಲು ಮುರಿದು ಅಲ್ಲಿದ್ದ ಹಣ ಹಾಗೂ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು,

ಈ ಹಿಂದೆ ಅವರು ತಮ್ಮ ಗುಲಾಬಿ ಗಾರ್ಡನ್ ಮೂಲಕ ಹೆಸರು ವಾಸಿಯಾಗಿದ್ದರು. ಮುಂಬೈನ ಆಕೆಯ ಮನೆಗೆ ಯಾರೋ ಗುಲಾಬಿ ಹೂಗಳನ್ನು ಕಳುಹಿಸುತ್ತಿದ್ದರಂತೆ. ಪ್ರತಿದಿನ ಸಾವಿರ ಗುಲಾಬಿ ಹೂಗಳು ಮನೆಗೆ ಬರುತ್ತಿವೆ ಎಂದು ಸೋನಲ್ ಹೇಳಿದ್ದಳು. ಈ ಹಿಂದೆ ಅರ್ಬಾಜ್ ಖಾನ್ ಜತೆಗೆ ಸೋನಲ್ ನಟಿಸಿದ್ದರು.

Comments are closed.