ರಾಷ್ಟ್ರೀಯ

16 ಜಿಬಿ ಸ್ಟೋರೇಜ್‌ನ ಕ್ಸಿಯೋಮಿ ಎಂಐ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ

Pinterest LinkedIn Tumblr

16ನವದೆಹಲಿ: ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಕ್ಸಿಯೋಮಿ ಎಂಐ ಮ್ಯಾಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಆರಂಭದಲ್ಲಿ ಕೇವಲ 32 ಜಿಬಿ, 64ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ನೀಡಿತ್ತು. ಆದರೆ, ಇದೀಗ ಸಂಸ್ಥೆ ಸದ್ದಿಲ್ಲದೆ 2 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಹೊಸ ಆವೃತ್ತಿಯ ಕ್ಸಿಯೋಮಿ ಎಂಐ ಮ್ಯಾಕ್ಸ್ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ 12,100 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿವೆ.

ಕ್ಸಿಯೋಮಿ ಎಂಐ ಮ್ಯಾಕ್ಸ್ ಆವೃತ್ತಿಯ 16 ಜಿಬಿ ಸ್ಮಾರ್ಟ್‌ಪೋನ್‌ಗಳನ್ನು ಸಂಸ್ಥೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಚೀನಾ ಮೂಲದ ಗಿಜ್ಮೋ ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯದ ಪೋನ್‌ಗಳು 2ಜಿಬಿ ರ್ಯಾಮ್ ಜೊತೆಗೆ 1.8ಜಿಎಚ್‌ಝಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 650 ಹೆಕ್ಸಾ-ಕೋರ್ ಎಸ್‌ಓಸಿ ಹೊಂದಿದ್ದು, ಎಲ್ಲಾ ಇತರ ವಿಶಿಷ್ಟಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತಿಳಿಸಿದೆ.

ಕ್ಸಿಯೋಮಿ ಎಮ್‌ಐ ಆವೃತ್ತಿಯ ಪೋನ್‌ಗಳು ಮೂರು ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಹೊಂದಿದ್ದು, 3 ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8 ಜಿಎಚ್‌ಝಡ್ ಹೆಕ್ಸಾ-ಕೋರ್ ಸ್ನಾಪ್ಡ್ರಾಗನ್ 650 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು ಗ್ರಾಹಕರಿಗೆ 15 ಸಾವಿರ ರೂಪಾಯಿಗಳಲ್ಲಿ ಲಭ್ಯವಿವೆ.

3 ಜಿಬಿ ರ್ಯಾಮ್, 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8ಜಿಎಚ್‌ಝಡ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 652 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 17 ಸಾವಿರ ರೂಪಾಯಿ ಮತ್ತು 4 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು ಸ್ನಾಪ್ಡ್ರಾಗನ್ 652 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 20,500 ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

Comments are closed.