ಕರಾವಳಿ

ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ ಮಾರ್ಗದರ್ಶನದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು : ವಿ.ಪ. ಮುಖ್ಯ ಸಚೇತಕ ಐವನ್ ಡಿ’ಸೋಜಾ

Pinterest LinkedIn Tumblr

Ivan_Dsoujz-sanman_1

ಮಂಗಳೂರು, ಜು.6: ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾರವರನ್ನು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಕೋಡಿಜಾಲ್ ಇಬ್ರಾಹಿಂರವರು ಶಾಲು ಹೊದಿಸಿ ಹೂಗುಚ್ಚ ನೀಡಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ ಅವರು, ತಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲಿವರೆಗೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಪಕ್ಷದ ಕಾರ್ಯಕರ್ತರೇ ನನ್ನನ್ನು ಬೆಂಬಲಿಸಿ ಇಂದು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ.ಉಸ್ತವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಪಕ್ಷದ ಹಿರಿಯ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ ಇವರ ಮಾರ್ಗದರ್ಶನದಲ್ಲಿ ಬೆಳೆದು ಇಂದು ಈ ಮಟ್ಟಕ್ಕೆ ಬೆಳೆಯಲು ಅವರ ಸಹಕಾರವೇ ನನಗೆ ಸಹಾಯವಾಯಿತು ಎಂದು ಹೇಳಿದರು.

Ivan_Dsoujz-sanman_2 Ivan_Dsoujz-sanman_3 Ivan_Dsoujz-sanman_4 Ivan_Dsoujz-sanman_5 Ivan_Dsoujz-sanman_6 Ivan_Dsoujz-sanman_7 Ivan_Dsoujz-sanman_8 Ivan_Dsoujz-sanman_9 Ivan_Dsoujz-sanman_10 Ivan_Dsoujz-sanman_11

ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಹರಿನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರ.ಕಾರ್ಯದರ್ಶಿ ಸದಾಶಿವ ಉಳ್ಳಾಲ್, ಐವನ್ ಡಿಸೋಜ ಪತ್ನಿ ಡಾ. ಕವಿತಾ, ಎ.ಸಿ ಭಂಡಾರಿ, ಪದ್ಮನಾಭ ನರಿಂಗಾನ, ಮೇಯರ್ ಹರಿನಾಥ್ , ಕಾಂಗ್ರೆಸ್ ಮುಖಂಡರುಗಳಾದ ಸುಭೋದ್ ಆಳ್ವ, ವಿಜಯಕುಮಾರ್ ಸೊರಕೆ, ಹಾಜಿ ಯು.ಕೆ.ಮೋನು, ಸಂತೋಷ್, ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ಎ. ಸಿ.ವಿನಯರಾಜ್, ಕವಿತಾ ಸನಿಲ್, ಮಹಮ್ಮದ್ ರಫಿ, ಆಶಿತ್ ಪಿರೇರಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಪ್ರವೀಣ್‌ಚಂದ್ರ ಆಳ್ವ, ಅಪ್ಪಿ, ಸಬಿತಾ ಮಿಸ್ಕಿತ್, ನಾಗವೇಣಿ, ಭಾಸ್ಕರ, ಕೇಶವ, ವಿನಯರಾಜ್, ರತಿಕಲಾ, ಶೈಲಜಾ, ಸತೀಶ್ ಪೆಂಗಲ್ ಚೇತನ್ ಉರ್ವ, ಗಿರೀಶ್ ಶೆಟ್ಟಿ, ಆಲ್ಟೈನ್ ಡಿಕುನ್ಹ, ಸ್ಟೀಫನ್, ಡೋಲ್ಪಿ, ರಾಜೇಶ್ ಶೆಟ್ಟಿ, ಎನ್.ಪಿ ಮನುರಾಜ್, ಮಹೇಶ್ ಕೋಡಿಕಲ್, ಅರುಣ್ ಕ್ರಾಸ್ತಾ ಮುಂತಾದವರು ಹಾಗೂ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

Comments are closed.