
ಖಾನ್ಕೆ, ಇರಾಕ್: ಕನ್ಯೆ, ಸುಂದರವಾಗಿರುವ ಹುಡುಗಿ, ವಯಸ್ಸು 12, ಇವಳ ಬೆಲೆ 12,500 ಡಾಲರ್ (8.5 ಲಕ್ಷ ರೂ.), ಶೀಘ್ರದಲ್ಲಿಯೇ ಮಾರಾಟಕ್ಕಿದ್ದಾಳೆ ಎಂಬ ಜಾಹೀರಾತು ಪತ್ರಿಕೆಯಲ್ಲಿ ಕಾಣಿಸಿಕೊಂಡರೆ ನಿಮಗೇನನ್ನಿಸಬಹುದು.
ಇರಾಕ್’ನ ಐಎಸ್ ಉಗ್ರರು ಲೈಂಗಿಕ ಗುಲಾಮನ್ನಾಗಿಟ್ಟುಕೊಂಡಿರುವ ಮಹಿಳೆಯರನ್ನು ಆ್ಯಪ್ ಮೂಲಕ ಮಾರಾಟ ಮಾಡುವ ಘೋರ ಸಂಗತಿಯನ್ನು ಅಲ್ಪಸಂಖ್ಯಾತ ಯಜಾದಿ ಸಮುದಾಯದ ಚಳುವಳಿಗಾರನೊಬ್ಬ ಟೆಲಿಗ್ರಾಪ್ ಪತ್ರಿಕೆಯ ಆ್ಯಪ್’ನಲ್ಲಿ ಷೇರ್ ಮಾಡಿದಾಗ ನಿಜಾಂಶ ಬಯಲಾಗಿದೆ.
ಐಎಸ್ ಉಗ್ರರು ತಮ್ಮ ನಿಯಂತ್ರಣದಲ್ಲಿದ್ದ ಕಲಿಫೇಟ್ ಪ್ರದೇಶವನ್ನು ಕಳೆದುಕೊಂಡಿದ್ದು, ಈ ನಡುವೆಯು 3 ಸಾವಿರ ಮಹಿಳೆಯರು ಹಾಗೂ ಬಾಲಕಿಯರನ್ನು ಗುಲಾಮರನ್ನಾಗಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ನಿಧಿ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ತಮ್ಮಲ್ಲಿರುವ ಮಹಿಳೆಯರು ಹಾಗೂ ಬಾಲಕಿಯರನ್ನು ಭಾವಚಿತ್ರಗಳೊಂದಿಗೆ ಜಾಹೀರಾತು ನೀಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಮಹಿಳೆಯರು ತಪ್ಪಿಸಿಕೊಳ್ಳಬಾರದೆಂದು ತಮ್ಮ ಪ್ರದೇಶದಲ್ಲಿರುವ ಎಲ್ಲ ಕಾವಲುಗಾರರಿಗೂ ಸೆರೆಯಿಟ್ಟುಕೊಂಡಿರುವವರ ಮಹಿಳೆಯ ಪರಿಪೂರ್ಣ ವರದಿಯನ್ನು ನೀಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇರಾಕಿ ಹಾಗೂ ಅಮೆರಿಕಾ ಮಿತ್ರಪಡೆಗಳು ಐಎಸ್ ಉಗ್ರರ ಪ್ರದೇಶವನ್ನು ಮರುವಶಕ್ಕೆ ಪಡೆಯುತ್ತಿವೆ. ಆದರೂ ಹೆಚ್ಚು ಸಂಖ್ಯೆಯ ಮಹಿಳೆಯರು ಉಗ್ರರ ಅಡಿಯಾಳಾಗಿದ್ದಾರೆ.
Comments are closed.