ಬೆಂಗಳೂರು : ಗುರು ದ್ರೋಣಾಚಾರ್ಯರು ತನ್ನ ಶಿಷ್ಯರ ಸತ್ವ ಪರೀಕ್ಷೆಗಾಗಿ ಸವಾಲುಗಳನ್ನು ಎದುರಿಟ್ಟಂತೆ ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿರುವ ಅನಿಲ್ ಕುಂಬ್ಳೆ ಆಟಗಾರರಿಗೆ ವಿಭಿನ್ನ ಸವಾಲುಗಳನ್ನುನೀಡುವ ಮೂಲಕ ಸತ್ವ ಪರೀಕ್ಷೆ ಮಾಡುತ್ತಿದ್ದಾರೆ.
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಆಟಗಾರರ ಮಟ್ಟವನ್ನು ಸುಧಾರಿಸಲು ಕುಂಬ್ಳೆ ನವನವೀನ ತಂತ್ರಗಳನ್ನು ಬಳಸಿ ಕೊಳ್ಳುತ್ತಿದ್ದಾರೆ. ಒಂದು ದಿನದ ಯೋಗ ತರಬೇತಿಯ ಬಳಿಕ ತಂಡದ ಆಟಗಾರರೆಲ್ಲರನ್ನು ಬೆಂಗಳೂರಿನ ಆಲೂರು ಕ್ರೀಡಾಂಗಣಕ್ಕೆ ಕರೆದೊಯ್ದು ವಿಭಿನ್ನ ಸವಾಲೊಂದನ್ನು ಎದುರಿಟ್ಟರು.
ಎಲ್ಲಾ ಆಟಗಾರರಿಗೆ ಟೆಸ್ಟ್ ಧಿರಿಸುಗಳನ್ನು ಧರಿಸಲು ಹೇಳಿದ ಕುಂಬ್ಳೆ ಬ್ಯಾಟ್ಸ್‌ಮನ್‌ಗಳಿಗೆ 1 ಗಂಟೆ ಔಟಾಗದೆ ಇರಲು , ಬೌಲರ್ಸ್‌ಗಳಿಗೆ 1 ಗಂಟೆಯ ಒಳಗೆ ಗರಿಷ್ಠ ವಿಕೆಟ್ ಪಡೆಯಲು ಪರಸ್ಪರ ಸವಾಲು ಮುಂದಿಟ್ಟರು.
ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಗಂಟೆಯೊಳಗೆ 2 ಬಾರಿ ರವೀಂದ್ರ ಜಡೇಜಾ ಎಸೆತಗಳಲ್ಲಿ ಔಟಾಗುವ ಮೂಲಕ ಗುರುವಿನ ಸವಾಲು ಗೆಲ್ಲುವಲ್ಲಿ ವಿಫಲರಾದರು.
ಶಿಖರ್ ಧವನ್ ಮತ್ತು ಮುರಳಿ ವಿಜಯ್ ಅವರೂ ಸವಾಲು ಗೆಲ್ಲುವಲ್ಲಿ ವಿಫಲವಾದರು.
ಜಂಬೋ ನೀಡಿದ ಸವಾಲು ಗೆದ್ದ ಏಕಮಾತ್ರ ಆಂಜಿಕ್ಯ ರೆಹಾನೆ 1 ಗಂಟೆಯ ಕಾಲ ಔಟಾಗದೆ ಬೌಲರ್‌ಗಳನ್ನು ಎದುರಿಸಿ ನೆಲ ಕಚ್ಚಿ ನಿಂತರು.
-ಉದಯವಾಣಿ
Comments are closed.