ಲಂಡನ್ : ಜಾತ್ರೆ ಎಂದಾಕ್ಷಣ ಅಂಗಡಿಗಳು, ಆಟಿಕೆಗಳು, ತಿನಿಸುಗಳು ಜನಸಾಗರ ಸಾಮಾನ್ಯ .ಆದರೆ ಲಂಡನ್ನ ಹೊರವಲಯದ ಬಯಲು ಪ್ರದೇಶವೊಂದರಲ್ಲಿ ನಡೆದ ಸೆಕ್ಸ್ ಜಾತ್ರೆಯಲ್ಲಿ 700ಕ್ಕೂ ಹೆಚ್ಚು ಜನ ಭಾಗವಹಿಸಿ ಸಂಭ್ರಮಿಸಿದ್ದಾರೆ.
2013 ರಿಂದ ಪ್ರತಿ ವರ್ಷ ರಸಿಕರಿಗಾಗಿ ಆಯೋಜಿಸಲಾಗುವ ಈ ಜಾತ್ರೆಯಲ್ಲಿ ಯೂರೋಪ್ನ ವಿವಿಧ ಪ್ರದೇಶಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ಜನ ಸಂಗೀತ, ಸಿನೇಮಾ ಮತ್ತು ಮುಕ್ತ ಲೈಂಗಿಕತೆಯನ್ನು ಅನುಭವಿಸಿ ಸಂಭ್ರಮಿಸಿದರು.
ಜಾತ್ರೆಗೆ ಬಂದ ರಸಿಕರಲ್ಲಿ ಭಿನ್ನ ಭಿನ್ನ ವಿಧದ ಜೋಡಿಗಳಲ್ಲಿ ಕೆಲ ಸಲಿಂಗಿಗಳ ಜೋಡಿಗಳೂ ಸೇರಿದ್ದವು. ಬಂದವರಿಗಾಗಿ ಎಂಜಾಯ್ ಮಾಡಲು ಸೆಕ್ಸ್ ಆಟಿಕೆಯ ಗುಡಾಣಗಳು ಮತ್ತು ಹಾಟ್ ಟಬ್ಗಳನ್ನು ನಿರ್ಮಿಸಲಾಗಿತ್ತು.
ಕೆಲವರಂತು ಟೆಂಟ್ಗಳ ಒಳಗೆ ಮಾಡಬೇಕಾಗಿದ್ದದನ್ನು ಬಹಿರಂಗವಾಗಿಯೆ ಯಾವುದೇ ಲಜ್ಜೆಯಿಲ್ಲದೆ ಮಾಡುತ್ತಿದ್ದುದನ್ನು ಒಳಗೆ ತೆರಳಿದ್ದ ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಿಸಿ ವರದಿ ಮಾಡಿದ್ದಾರೆ.
ಒಟ್ಟಿನಲ್ಲಿ ಸ್ವೇಚ್ಛಾಚಾರದ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಟಿಕೇಟನ್ನು ಇಡಲಾಗಿದ್ದು,ಅನಪೇಕ್ಷಿತ ಅತಿಥಿಗಳು ಒಳ ನುಸುಳದಂತೆ ಭದ್ರತೆಯನ್ನೂ ಬಿಗಿ ಗೊಳಿಸಲಾಗಿತ್ತಂತೆ.
ಪಾಲ್ಗೊಂಡ ರಸಿಕರಿಗೆ ಮಧ್ಯ ಮತ್ತು ಆಹಾರವನ್ನೂ ನೀಡಲಾಗಿತ್ತಂತೆ.
-ಉದಯವಾಣಿ
Comments are closed.