ಕರ್ನಾಟಕ

ಜನಸಾಮಾನ್ಯರ ಸೇವೆಗೆ ಪಣ : ರಮೇಶ್ ಜಿಗಜಿಣಗಿ

Pinterest LinkedIn Tumblr

JIGA

ಸಚಿವ ಸ್ಥಾನ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ದೇಶದ, ರಾಜ್ಯದ ಜನರಿಗೆ ನೆರವಾಗಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಪಕ್ಷ ಕಟ್ಟುವ ಕೆಲಸದಲ್ಲೂ ಭಾಗಿಯಾಗುವೆ. 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಬದಲಾಗಿದೆ. ಸಚಿವ ಸ್ಥಾನದಲ್ಲಿ ಇರಲಿ, ಬಿಡಲಿ ಬಡವರಿಗಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ನೂತನ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ಕಟ್ಟ ಕಡೆಯ ದಟ್ಟ ದರಿದ್ರರ ಜೊತೆಗಿರುವೆ. ಕೊಟ್ಟ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ನನಗೆ ತಡವಾಗಿ ಅವಕಾಶ ಸಿಕ್ಕಿತು ಎನ್ನುವ ಭಾವನೆ ಇಲ್ಲ. ನನ್ನನ್ನು ರಾಜಕಾರಣಕ್ಕೆ ತಂದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದು ರಾಮಕೃಷ್ಣ ಹೆಗಡೆರವರು, ವಾಜಪೇಯಿ ಸರ್ಕಾರದಲ್ಲೇ ಮಂತ್ರಿಯಾಗುವ ಅವಕಾಶ ಸಿಕ್ಕಿತ್ತು ಆದರೆ, ಕೈಗೂಡಲಿಲ್ಲ ಎಂದು ಹೇಳಿದರು.

ನಾನು ಕೇವಲ ಉತ್ತರ ಕರ್ನಾಟಕದ ಪ್ರತಿನಿಧಿಯಲ್ಲ. ಇಡೀ ದೇಶದ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಮಂತ್ರಿ. ಜೆಎಚ್ ಪಟೇಲ್ ಅವರು ಸಂಸದರಾಗಿದ್ದಾಗ ಇದೇ ಮನೆಯಲ್ಲಿದ್ದರು ಎನ್ನುವ ಕಾರಣಕ್ಕೆ 18 ವರ್ಷದಿಂದ ನಾನು ಇದೇ ಮನೆಯಲ್ಲಿದ್ದೇನೆ ಎಂದು ದೆಹಲಿ ನಿವಾಸದ ಗುಟ್ಟು ಬಿಚ್ಚಿಟ್ಟರು.

Comments are closed.