ಅಂತರಾಷ್ಟ್ರೀಯ

ಹಾಗಲಕಾಯಿ: ಆರೋಗ್ಯಕಾರಿ ಅಂಶಗಳ ಆಗರ

Pinterest LinkedIn Tumblr

haagala

ಹಸಿರು ತರಕಾರಿಗಳ ಮಹತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಶೇಷವಾಗಿ ಹಾಗಲಕಾಯಿಯಲ್ಲಿ ಆರೋಗ್ಯಕಾರಿ ಅಂಶಗಳ ಕುರಿತು ತಿಳಿದೇ ಇರುತ್ತದೆ. ಅದೊಂದು ನಮ್ಮ ಆರೋಗ್ಯ ವೃದ್ಧಿಸುವ ಪೋಷಕಾಂಶಗಳನ್ನೊಳಗೊಂಡ ಆಗರವೆಂದೇ ಬಣ್ಣಿಸಲಾಗುತ್ತದೆ.

ಹಾಗಲಕಾಯಿ ರುಚಿ ಕಹಿಯಾದರೂ, ಅದನ್ನು ಸಹಿಸಿಕೊಂಡು ಸೇವನೆ ಮಾಡುವುದನ್ನು ರೂಢಿಸಿಕೊಂಡರೆ, ನಮ್ಮ ಆರೋಗ್ಯವೃದ್ಧಿಸಲಿದೆ. ಆಯುರ್ವೇದದಲ್ಲೂ ಹಾಗಲಕಾಯಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಇಂದಿನ ವೈಜ್ಞಾನಿಕ ವಿಶ್ಲೇಷಣೆಗಳೂ ಇದನ್ನು ಖಾತರಿಪಡಿಸಿವೆ.

ಹಾಗಲಕಾಯಿಯನ್ನು ತರಕಾರಿ ರೂಪದಲ್ಲಿ ಸೇವಿಸುವುದಕ್ಕಿಂತ ಹೆಚ್ಚು ಪರಿಣಾಮವನ್ನು ಅದರ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕವೂ ಪಡೆಯಬಹುದಾಗಿದೆ. ಜ್ಯೂಸ್ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಲೋಟ ಕುಡಿದರೆ, ಅದರಿಂದ ಅಪಾರ ಪ್ರಯೋಜನಗಳಾಗಲಿವೆ.

ಹಾಗಲಕಾಯಿ ರಸವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ, ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರು ದಿನಗಳಲ್ಲಿ ನಿಯಂತ್ರಣಕ್ಕೆ ಬರಲಿದೆ. ಇದಕ್ಕೆ ಕಾರಣ ಅದರಲ್ಲಿರುವ ಮೊಮೊರ್ಸಿಡಿನ್ ಹಾಗೂ ಚಾರಿಟಿನ್ ಎಂಬ ಅಂಶಗಳಾಗಲಿವೆ.

ಟೈಪ್-2 ನಂತಹ ಮಾರಕ ಮಧುಮೇಹವನ್ನು ಗುಣಪಡಿಸುವ ಸಾಮರ್ಥ್ಯವಿರುವ ಸಿದ್ಧ ಆಹಾರವೆಂದರೆ, ಅದು ಹಾಗಲಕಾಯಿ ಎಂದೇ ಹೇಳಬಹುದು. ತನ್ನಲ್ಲಿನ ಕಹಿರುಚಿಯಿಂದಾಗಿ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗದ ಮುಳ್ಳುಮುಳ್ಳಾದ ತರಕಾರಿ ನಿಜಕ್ಕೂ ಆರೋಗ್ಯವೃದ್ಧಿಸುವ ಪೋಷಕಾಂಶಗಳ ಆಗರವೆಂದೇ ಹೇಳಲಾಗುತ್ತದೆ.

ಜ್ಯೂಸ್ ಮಾಡುವ ವಿಧಾನ
ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆದು, ಮಧ್ಯಭಾಗದಲ್ಲಿ ಕತ್ತರಿಸಬೇಕು, ಅದರಲ್ಲಿರುವ ಬೀಜಗಳನ್ನು ಚಮಚದ ಮೂಲಕ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಸಿಪ್ಪೆಯ ಕಹಿಯನ್ನು ಸಹಿಸಿಕೊಳ್ಳುವ ಮನಸ್ಸಿದ್ದಲ್ಲಿ, ಸಿಪ್ಪೆ ತೆಗೆಯುವ ಅಗತ್ಯವಿಲ್ಲ.

ನಂತರ ಒಂದು ಪಾತ್ರೆಗೆ ಹಾಕಿ, ಅದಕ್ಕೆ ನೀರು ತುಂಬಿಸಿ, ಸುಮಾರು ಅರ್ಧಗಂಟೆ ಕಾಲ ನೆನೆಸಿಡಬೇಕು. ಅಗತ್ಯವೆನಿಸಿದರೆ ಸ್ವಲ್ಪ ಉಪ್ಪು ಅಥವಾ ನಿಂಬೆ ರಸವನ್ನು ಸೇರಿಸಿದರೆ ಕಹಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಬಳಿಕ ಮಿಕ್ಸರ್‌ಗೆ ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು.

ಗಮನಿಸಬೇಕಾದ ಅಂಶಗಳು
ಒಂದು ದಿನಕ್ಕೆ ಎರಡು ಹಾಗಲಕಾಯಿಗಳಿಗಿಂತ ಹೆಚ್ಚಿಗೆ ಸೇವಿಸಬಾರದು, ಹೆಚ್ಚಿಗೆ ಬಳಸಿದರೆ, ಅತಿಸಾರ ಉಂಟಾಗುವ ಸಾಧ್ಯತೆಯಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಧುಮೇಹಿಗಳು, ಇದಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ, ಹಾಗಲಕಾಯಿ ಸೇವನೆ ಮೂಲಕ ಔಷಧಿ ಪ್ರಮಾಣವನ್ನು ಕಡಿತ ಮಾಡಲು ಸಾಧ್ಯವಿರುತ್ತದೆ. ಯಾವುದಕ್ಕೂ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಯಾರು ಏನೇ ಹೇಳಿದರೂ, ಜೋಟ್ಟುದ್ದದ ಹಾಗಲಕಾಯಿ, ಬಾಯಿಗೆ ಕಹಿಯಾದರೂ, ಆರೋಗ್ಯವೃದ್ಧಿ ವಿಚಾರದಲ್ಲಿ ಸಿಹಿಯಾಗಲಿದೆ ಎಂಬುದನ್ನು ಮರೆಯುವಂತಿಲ್ಲ.

Comments are closed.