
ಸೇಲಂ: ದೊಡ್ಡ ಪಾತ್ರೆಯಲ್ಲಿ ಬೆಂದ ಸ್ಥಿತಿಯಲ್ಲಿ 6 ವರ್ಷದ ಬಾಲಕಿಯ ಮೃತದೇಹ ಪತ್ತೆಯಾದ ಘೋರ ಘಟನೆ ತಮಿಳುನಾಡಿನ ಸೇಲಂನಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
17 ವರ್ಷದ ಯುವಕನೊಬ್ಬ 2 ತರಗತಿಯ ಬಾಲಕಿಯನ್ನ ಅತ್ಯಾಚಾರ ಮಾಡಿ ಆಕೆಯನ್ನ ಕೊಂದು ದೊಡ್ಡ ಪಾತ್ರೆಯಲ್ಲಿ ಆಕೆಯ ಮೃತದೇಹವನ್ನ ಬೇಯಿಸಿದ್ದು, ಕೃತ್ಯವೆಸಗಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಅದೇ ಬಡಾವಣೆಯ 17 ವರ್ಷದ ಯುವಕ, ಶನಿವಾರ ಬಾಲಕಿಗೆ ಸಿಹಿ ತಿನಿಸನ್ನ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯನ್ನ ಕೊಂದು ಹೀಗೆ ಪಾತ್ರೆಯಲ್ಲಿ ಬೇಯಿಸಿದ್ದಾನೆ. ಬಳಿಕ ಅದನ್ನು ದೇವರ ಮನೆಯಲ್ಲಿ ಇರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯ ತಂದೆ ಶನಿವಾರ ಸಂಜೆಯಿಂದಲೂ ಆಕೆಗಾಗಿ ಹುಡುಕಾಟ ನಡೆಸಿದ್ದರು. ಅಲ್ಲದೇ ಸ್ಥಳೀಯರು ಆಕೆ ಈ ಯುವಕನೊಂದಿಗೆ ಹೋಗುತ್ತಿದ್ದನ್ನು ನೋಡಿದ್ದಾಗ ತಿಳಿಸಿದ್ದರು. ನಂತರ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿ, ಯುವಕನ ಮನೆ ಪರಿಶೀಲನೆ ನಡೆಸಿದಾಗ ಆತ ಸಿಕ್ಕಿಬಿದ್ದಿದ್ದಾನೆ.
Comments are closed.