ಅಂತರಾಷ್ಟ್ರೀಯ

ಭಾರತ ಇನ್ನೂ 1962ರ ಯುದ್ಧಕಾಲದ ಮನಸ್ಥಿತಿಯಲ್ಲಿದೆ: ಚೀನಾ ಮಾಧ್ಯಮ

Pinterest LinkedIn Tumblr

namo_story_ಬೀಜಿಂಗ್: ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ನೆರೆಯ ಚೀನಾ ದೇಶವೇ ಕಾರಣ ಎಂಬ ಭಾರತದ ಕಟು ಟೀಕೆಯನ್ನು ನೋಡಿದರೆ, ಭಾರತ ಇನ್ನೂ 1962ರ ಯುದ್ಧದ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಚೀನಾ ಸರ್ಕಾರಿ ಸ್ವಾಮಿತ್ವದ ದೈನಿಕ ಸೋಮವಾರದ ಲೇಖನದಲ್ಲಿ ಈ ರೀತಿ ಅಭಿಪ್ರಾಯವ್ಯಕ್ತಪಡಿಸಿದೆ.

ಭಾರತ ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ಸದಸ್ಯತ್ವ ಪಡೆಯಲು ವಿಫಲವಾಗಿರುವ ಕಾರಣಗಳನ್ನು ಬದಿಗೊತ್ತಿ, ಚೀನಾದ ವಿರೋಧದಿಂದ ಭಾರತಕ್ಕೆ ಸದಸ್ಯತ್ವ ದೊರೆಯಲಿಲ್ಲ ಎಂದು ಮಾಧ್ಯಮಗಳು ಹಾಗೂ ಕೇಂದ್ರ ಸರ್ಕಾರ ಕೂಡಾ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸಿಯೋಲ್ನಲ್ಲಿ ನಡೆದ ಎನ್ಎಸ್ಜಿ ಸಭೆಯಲ್ಲಿ ಭಾರತ ಸದಸ್ಯತ್ವ ಪಡೆಯಲು ವಿಫಲವಾಗಿತ್ತು. ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಭಾರತೀಯ ನಾಗರಿಕರಿಗೆ ಸಾಧ್ಯವಾಗುತ್ತಿಲ್ಲ. ಭಾರತೀಯ ಮಾಧ್ಯಮಗಳಂತೂ ಎನ್ಎಸ್ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣವೆಂದು ಆರೋಪಿಸುತ್ತಿವೆ. ಚೀನಾವನ್ನು ಭಾರತ ವಿರೋಧಿ, ಪಾಕಿಸ್ತಾನ ಪರ ಎಂದು ಬಿಂಬಿಸುತ್ತಿವೆ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ತಿಳಿಸಿದೆ.

ಭಾರತದಲ್ಲಿ ಚೀನಾ ವಿರೋಧಿ ಪ್ರತಿಭಟನೆ ಹೇಗೆ ನಡೆಯಿತೆಂದರೆ ಕೆಲವರು ಚೀನಾ ಮತ್ತು ಚೀನಾ ವಸ್ತುಗಳ ವಿರುದ್ಧವೇ ಭಾರತದ ಕೆಲವು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ಹಾಗಾಗಿ ಈ ಬೆಳವಣಿಗೆ ಬಗ್ಗೆ ಕೆಲವು ವೀಕ್ಷಕರ ಅಭಿಪ್ರಾಯದ ಪ್ರಕಾರ ಇದು ಭಾರತ ಮತ್ತು ಚೀನಾ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ತಿಳಿಸಿದೆ.

ಆ ನೆಲೆಯಲ್ಲಿ ಭಾರತದ ದೃಷ್ಟಿಕೋನ ಗಮನಿಸಿದರೆ ಅದು 1960ರ ಚೀನಾ ಯುದ್ಧದ ನೆರಳಿನಿಂದ ಹೊರಬಂದಂತಿಲ್ಲ…ಆದರೆ ಚೀನಾಕ್ಕೆ ಭಾರತದ ಈ ತೆರನಾದ ನಿಲುವಿನ ಅಗತ್ಯವಿಲ್ಲ ಎಂದು ಲೇಖನದಲ್ಲಿ ವಿಶ್ಲೇಷಿಸಿದೆ.

ಏನೇ ಇರಲಿ ಈ ವಿಚಾರದಲ್ಲಿ ಭಾರತ ಚೀನಾದ ಬಗ್ಗೆ ಅಪಾರ್ಥ ಮಾಡಿಕೊಂಡಿದೆ. ಚೀನಾ ಭಾರತವನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ಕಾಣುತ್ತಿಲ್ಲ, ಅದು ಹೊರತಾಗಿ ಆರ್ಥಿಕ ದೃಷ್ಟಿಯು ಪ್ರಮುಖವಾಗಿದೆ ಎಂದು ತಿಳಿಸಿದೆ.
-ಉದಯವಾಣಿ

Comments are closed.