
ಡೆಹ್ರಾಡೂನ್: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ದೇವಾಲಯಗಳ ಉತ್ತರಾಖಂಡ್ ತತ್ತರಿಸಿಹೋಗಿದ್ದು, ಮಳೆ ಮತ್ತು ಭೂ ಕುಸಿತಗಳಿಗೆ ಬಲಿಯಾದವರ ಸಂಖ್ಯೆ 40ಕ್ಕೆ ಏರಿದೆ. ಇನ್ನೂ ಹಲವಾರು ಜನ ಕಣ್ಮರೆಯಾಗಿದ್ದಾರೆ.
ರಾಜ್ಯದ ಸುಮಾರು 10ಕ್ಕೂ ಹೆಚ್ಚು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜಲಪ್ರಳಯವೇ ಆದಂತಾಗಿದೆ. ಸಾವಿರಾರು ಮನೆಗಳು ಜಲಾವೃತವಾಗಿವೆ. ಸುಮಾರು ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ವಿದ್ಯುತ್ ಸಂಪರ್ಕ, ದೂರ ಸಂಪರ್ಕ, ಕುಡಿಯುವ ನೀರು ವ್ಯತ್ಯಯವಾಗಿದೆ. ರಾಷ್ಟ್ರೀಯ ಹೆದ್ದಾರಿ-7 ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ನೂರಾರು ವಾಹನಗಳು ನೀರಿನಲ್ಲಿ ಮುಳುಗಿದ್ದು, ಎಲ್ಲೆಂದರಲ್ಲಿ ನಿಂತಿವೆ.
ಈ ಮಧ್ಯೆ ಕಳೆದ ಎರಡು ದಿನಗಳಿಂದ ಕುಸಿದು ಬಿದ್ದ ಅವಶೇಷಗಳಡಿ ಸಿಲುಕಿದ್ದ ಮಹಿಳೆಯೊಬ್ಬಳು ಪವಾಡ ಸದೃಶವಾಗಿ ಬದುಕುಳಿದಿದ್ದಾಳೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್ಡಿಆರ್ಎಫ್) ಸಿಬ್ಬಂದಿ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ರಕ್ಷಣಾ ಕಾರ್ಯದಲ್ಲಿ ಭಾರತ-ಟಿಬೆಟ್ ಗಡಿ ಕಾವಲು ಪೆÇಲೀಸ್ (ಐಟಿಬಿಎಫ್), ಸೀಮಾ ಸುರಕ್ಷಾ ಬಲ್ (ಎಸ್ಎಸ್ಬಿ) ಹಾಗೂ ಭಾರತೀಯ ಸೇನಾಪಡೆ ಯೋಧರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
Comments are closed.