
ಢಾಕಾ: ಬಾಂಗ್ಲಾದೇಶದ ಢಾಕಾದ ಕೇಫೆಯೊಂದರ ಮೇಲೆ ದಾಳಿ ನಡೆಸಿದ ಉಗ್ರರೆಲ್ಲರೂ ಅತ್ಯಂತ ಸುಸಂಸ್ಕೃತ ಕುಟುಂಬದಿಂದ ಬಂದವರಾಗಿದ್ದು, ಪ್ರತಿಷ್ಠಿತ ಶಾಲೆಗಳಲ್ಲಿ ಉನ್ನತ ಪದವಿಗಳನ್ನು ಪಡೆದರಾಗಿದ್ದಾರೆ ಎಂದು ಭಾನುವಾರ ಬಾಂಗ್ಲಾ ಸಚಿವರೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾ ಪ್ರಜೆ ಸೇರಿದಂತೆ 20 ವಿದೇಶಿಯರನ್ನು ಬಲಿ ಪಡೆದ ಉಗ್ರರೆಲ್ಲರೂ ೨೦ ರಿಂದ ೨೧ ವರ್ಷದ ಯುವಕರಾಗಿದ್ದು, ಅವರು ಡಾಕಾ ನಾರ್ಥ್‌ಸೌತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಅದರಲ್ಲಿ ಯಾರೊಬ್ಬರು ಮದರಸಾಗಳಿಂದ ಬಂದಿಲ್ಲ ಎಂದು ಬಾಂಗ್ಲಾ ಗೃಹ ಸಚಿವ ಅಸಾದುಝಮಾನ್ ಖಾನ್ ಅವರು ಹೇಳಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಉಗ್ರರು ಪ್ರತಿಷ್ಠಿತ ಸ್ಕೂಲಾಸ್ಟಿಕ ಮತ್ತು ಟುರ್ಕಿಶ್ ಇಂಟರ್‌ನ್ಯಾಷನಲ್ ಸ್ಕೂಲ್‌ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದರು ಉಗ್ರರಾಗಿದ್ದು, ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ಫ್ಯಾಷನ್ ಗಾಗಿ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಉಗ್ರರನ್ನು ಅಬು ಉಮರ್, ಅಬು ಸಲ್ಲಾಹ್, ಅಬು ರಹೀಮ್, ಅಬು ಮುಹೈರಿಬ್ ಅಲ್ ಬಂಗಾಲ್ ಎಂದು ಗುರುತಿಸಲಾಗಿದೆ. ಆರೋಪಿಗಳ ಹೆಸರು ಮತ್ತು ಭಾವಚಿತ್ರಗಳನ್ನು ಬಾಂಗ್ಲಾದೇಶ ಸರ್ಕಾರ ಇನ್ನಷ್ಟೇ ದೃಢೀಕರಿಸಬೇಕಿದೆ. ಇವರೆಲ್ಲರೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
Comments are closed.