ರಾಷ್ಟ್ರೀಯ

ಚೆನ್ನೈ: ಟೆಕ್ಕಿ ಸ್ವಾತಿ ಕೊಲೆ ಹಿಂದಿನ ಘಟನೆ

Pinterest LinkedIn Tumblr

swati-murdererಚೆನ್ನೈ: ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಸ್ವಾತಿ ಎಂಬಾಕೆಯನ್ನು ರೈಲು ನಿಲ್ದಾಣದಲ್ಲಿ ಹಾಡಹಗಲೇ ಕೊಂದ ಸುದ್ದಿ ಇಡೀ ತಮಿಳುನಾಡನ್ನು ಬೆಚ್ಚಿ ಬೀಳಿಸಿತ್ತು. ಪೊಲೀಸರಿಗೆ ಆರೋಪಿಯನ್ನು ಹಿಡಿಯುವುದು ಸವಾಲಿನ ವಿಷಯವಾಗಿತ್ತು.

ಆರೋಪಿಯನ್ನು ಹಿಡಿಯಲು ಪೊಲೀಸರು ಸುಮಾರು 5 ಲಕ್ಷ ದೂರವಾಣಿ ಕರೆಗಳನ್ನು ಪರಿಶೀಲಿಸಿದ್ದರು. ಕೊನೆಗೆ ಅವರಿಗೆ ಸಾಕ್ಷ್ಯ ಸಿಕ್ಕಿದ್ದು ಒಂದು ಶೂ. ಪೊಲೀಸರು ಮನೆ ಮನೆಗೆ ಹೋಗಿ ವಿಚಾರಣೆ ನಡೆಸುತ್ತಿದ್ದಾಗ ಆತನ ರೂಂಮೇಟ್ ನಟೇಶನ್ ಮೂಲಕ ಮಾಹಿತಿ ಸಿಕ್ಕಿದೆ.
ಇಷ್ಟಕ್ಕೂ ಸ್ವಾತಿ ಕೊಲೆ ನಡೆದದ್ದು ಹೇಗೆ, ಅದರ ಹಿನ್ನೆಲೆ ಏನು?
ಸ್ವಾತಿ ಕೊಲೆಗಡುಕ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಮೊದಲು ಗಮನಿಸಿದ್ದು ಜೂನ್ 11 ರಂದು, ಅಂದು ತನ್ನ ಸ್ನೇಹಿತ ಮೊಹಮ್ಮದ್ ಬಿಲಾಲ್ ಗೆ ಆತನ ಬಗ್ಗೆ ಹೇಳುತ್ತಾಳೆ. ಜೂನ್ 16ರಂದು ಮತ್ತೆ ತನ್ನ ಬೆನ್ನುಬಿದ್ದವನನ್ನು ಗಮನಿಸುತ್ತಾಳೆ. ಆ ಸಂದರ್ಭದಲ್ಲಿ ಅವನು ನುಂಗಂಬಕ್ಕಮ್ ನಿಂದ ಪರನೂರಿಗೆ ಸ್ವಾತಿಯ ಒಟ್ಟೊಟ್ಟಿಗೆ ರೈಲಿನಲ್ಲಿ ಪ್ರಯಾಣಿಸುತ್ತಾನೆ. ಮತ್ತೆ ಜೂನ್ 18ರಂದು ಕಣ್ಣಿಗೆ ಕಾಣಿಸುತ್ತಾನೆ.
ಜೂನ್ 24ರಂದು ಬೆಳಗಿನ ಜಾವ 6.30 ರ ಸುಮಾರಿಗೆ ಸ್ವಾತಿ ಆಫೀಸಿಗೆ ಹೋಗಲು ತನ್ನ ಮನೆಯ ಹತ್ತಿರದ ರೈಲ್ವೆ ನಿಲ್ದಾಣವಾದ ನುಂಗಂಬಕ್ಕಮ್ ಗೆ ಹೋಗುತ್ತಾಳೆ. ಅಲ್ಲಿ ಕೊಲೆಗಡುಕ ನಿಂತಿರುತ್ತಾನೆ. ಅಲ್ಲಿ ಇಬ್ಬರ ನಡುವೆಯೂ ಜಗಳವಾಗಿ ಸ್ವಾತಿಯನ್ನು ಕತ್ತಿಯಿಂದ ಇರಿದು ಕೊಲ್ಲುತ್ತಾನೆ.
ತನಿಖೆ ಆರಂಭಿಸಿದ ಚೆನ್ನೈ ಪೊಲೀಸರು ಮೊಬೈಲ್ ನ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಆ ಪ್ರದೇಶದಲ್ಲಿ ಮೊಬೈಲ್ ಬಳಸಿದವರ ಮತ್ತು ಸಮಯದ ಮಾಹಿತಿ ಪಡೆದು 48 ದೂರವಾಣಿ ಸಂಖ್ಯೆಗಳನ್ನು ಅಂತಿಮಗೊಳಿಸುತ್ತಾರೆ. ಮನೆ ಮನೆಗೆ ಹೋಗಿ ವಿಚಾರಿಸಿದಾಗ ಆರೋಪಿ ರಾಮ್ ಕುಮಾರ್ ನ ರೂಂಮೇಟ್ ನಟೇಶನ್ ಮೂಲಕ ಗೊತ್ತಾಗುತ್ತದೆ.
ಜೂನ್ 30ರಂದು ಪೊಲೀಸರು ಹಸಿರು ಬಣ್ಣದ ಗೆರೆ ಇರುವ ಅಂಗಿಯನ್ನು ಪೊಲೀಸರು ನಟೇಶನ ರೂಮಿನಲ್ಲಿ ಗಮನಿಸುತ್ತಾರೆ. ರೂಮಿನಲ್ಲಿದ್ದ ಡೈರಿಯಲ್ಲಿ ತಿರುನಲ್ವೇಲಿ ವಿಳಾಸವಿರುತ್ತದೆ. ಅದು ಆರೋಪಿಯ ಮೊಬೈಲ್ ದಾಖಲೆಗಳಿಗೆ ಹೊಂದಿಕೆಯಾಯಿತು.
ಜುಲೈ 1ರಂದು ಚೆನ್ನೈ ಪೊಲೀಸ್ ಆಯುಕ್ತ ತಿರುನಲ್ವೇಲಿ ಎಸ್ ಪಿಯನ್ನು ಸಂಪರ್ಕಿಸಿ ನಂತರ ರಾಮ್ ಕುಮಾರ್ ನ ಗ್ರಾಮಕ್ಕೆ ಪೊಲೀಸರ ತಂಡವನ್ನು ಕಳುಹಿಸುತ್ತಾರೆ. ಪೊಲೀಸರು ಹಿಡಿಯಲು ಹೋದಾಗ ಕತ್ತು ಸೀಳಿಕೊಂಡ ರಾಮ್ ಕುಮಾರ್ ಮನೆಯ ಹಿಂಬದಿ ಬಾಗಿಲಿನಿಂದ ಓಡಲಾರಂಭಿಸಿದ.

Comments are closed.