ಮನೋರಂಜನೆ

ದಂಡುಪಾಳ್ಯ-2 ಚಿತ್ರೀಕರಣಕ್ಕೆ ಗ್ರೀನ್‌ ಸಿಗ್ನಲ್‌

Pinterest LinkedIn Tumblr

dandu“ಡಂಡುಪಾಳ್ಯ-2′ ಚಿತ್ರದ ವಿರುದ್ಧ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಾಲಯ, ಚಿತ್ರ ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ ದಂಡುಪಾಳ್ಯಖೈದಿಗಳು, ತಮ್ಮ ಪರ ವಕೀಲರ ಮೂಲಕ ಬೆಂಗಳೂರು ಸಿವಿಲ್‌ ನ್ಯಾಯಾಲಯಕ್ಕೆ “ದಂಡುಪಾಳ್ಯ’ ಚಿತ್ರ ನಮ್ಮ ಜೀವನದ ಕಥನವಾಗಿದ್ದು, ಆ ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ತೀರ ಕ್ರೂರವಾಗಿ ಮತ್ತು ಅವಮಾನಕರವಾಗಿ ತೋರಿಸಿದ್ದಾರೆಂದು ದೂರಿ, “ದಂಡುಪಾಳ್ಯ-2′ ಚಿತ್ರದ ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಮಧ್ಯಂತರ ತಡೆಯಾಜ್ಞೆ ಕೋರಿದ್ದರು. ಈ ಕುರಿತು ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು, “ದಂಡುಪಾಳ್ಯ-2′ ಚಿತ್ರ ಶೀರ್ಷಿಕೆ ಹಾಗೂ ಚಿತ್ರಕಥೆಯ ಮೇಲೆ ದೂರುದಾರರು ಯಾವುದೇ ಹಕ್ಕು ಸ್ಥಾಪಿಸುವ ಅವಕಾಶವಿಲ್ಲವೆಂದು ಹೇಳುವ ಮೂಲಕ ಚಿತ್ರತಂಡಕ್ಕೆ ಕ್ಲೀನ್‌ ಚಿಟ್‌ ನೀಡಿದೆ.

ಚಿತ್ರ ತಂಡದ ಪರ ವಕೀಲ ರವಿಶಂಕರ್‌ ಅವರು ವಾದ ಮಂಡಿಸಿ, “ಕೋಟಿಗಟ್ಟಲೆ ಹಣ ಹಾಕಿ ಸಾಮಾಜಿಕ ಕಳಕಳಿುಂದ
ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಚಿತ್ರ ತಂಡದ ವಾದ ಪರಿಗಣಿಸಿದ ನ್ಯಾಯಾಲಯ, ಖೈದಿಗಳು ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಚಿತ್ರದ ಚಿತ್ರೀಕರಣ ಮತ್ತು ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ಮಾಪಕ ವೆಂಕಟ್‌, “ನಾವು ಯಾರ ಬಗ್ಗೆಯೂ ಕೀಳಾಗಿ ತೋರಿಸಲು ಹೊರಟಿಲ್ಲ. ಅಷ್ಟಕ್ಕೂ ನಮ್ಮ ಚಿತ್ರ ತೆರೆಗೆ ಬಂದಿಲ್ಲ. ಆದರೆ, ನಮ್ಮ ಬಗ್ಗೆ ಅವಹೇಳನ ಮಾಡಲಾಗಿದೆ ಅಂತ ತಕರಾರು ಅರ್ಜಿ ಹಾಕಿದ್ದರು.

ನ್ಯಾಯಾಲಯಕ್ಕೆ ನಾವು ನಮ್ಮ ವಾದ ಮಂಡಿಸಿದಾಗ, ನಮ್ಮಂತೆಯೇ ತೀರ್ಪು ಬಂದಿದೆ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಕೆಲಸ ಬಹುತೇಕ ಮುಗಿದಿದೆ. ಅಕ್ಟೋಬರ್‌ ಹೊತ್ತಿಗೆ ರಿಲೀಸ್‌ ಮಾಡುವ ಯೋಚನೆ ಇದೆ ಎನ್ನುತ್ತಾರೆ’ ನಿರ್ಮಾಪಕ ವೆಂಕಟ್‌.
-ಉದಯವಾಣಿ

Comments are closed.