ಅಂತರಾಷ್ಟ್ರೀಯ

ಉಗ್ರ ಸಂಘಟನೆ ಐಸಿಸ್‌,ಈಕೆಯ ಹೆಸರೂ ಐಸಿಸ್‌!

Pinterest LinkedIn Tumblr

isis (1)

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆಯ ಕುರುಹುಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವ ಪ್ರಯತ್ನದಲ್ಲಿರುವ ಫೇಸ್‌ಬುಕ್‌, “ಐಸಿಸ್‌’ ಹೆಸರಿನ ಮಹಿಳೆಗೆ ತನ್ನ ಗುರುತು ಚೀಟಿಯನ್ನು ನೀಡಲು ಹೇಳಿದೆ. ಗುರುತಿನ ಚೀಟಿ ಪ್ರಮಾಣಿಸಿದ ನಂತರವಷ್ಟೇ ಫೇಸ್‌ಬುಕ್‌ ಬಳಸಲು ಅನುವು ಮಾಡಲಿದೆ. ಬ್ರಿಟನ್‌ನ ಬ್ರಿಸ್ಟಲ್‌ ನಿವಾಸಿ ಐಸಿಸ್‌ ಥಾಮಸ್‌ ಎಂಬ ಮಹಿಳೆ ಐಸಿಸ್‌ ಹೆಸರಿನಿಂದಾಗಿ ತೊಂದರೆಗೀಡಾದ ಮಹಿಳೆ.

ಗುರುತಿನ ಚೀಟಿ ನೀಡುವುದರ ಜೊತೆ ಈಕೆಗೆ ತನ್ನ ಹೆಸರನ್ನು ಬದಲಿಸುವಂತೆ ಫೇಸ್‌ಬುಕ್‌ ಹೇಳಿದೆ.”ಐಸಿಸ್‌ ಈಜಿಪ್ಟ್ನ ಆರೋಗ್ಯ ದೇವತೆ. ನಾನು ಮೊದಲು ಫೇಸ್‌ ಬುಕ್‌ ಬಳಸುವಾಗ ಐಸಿಸ್‌ ವೊರ್ಸೆ ಸ್ಟರ್‌ ಎಂಬ ಹೆಸರು ಇರಿಸಿಕೊಂಡಿದ್ದೆ. ಇಷ್ಟೆಲ್ಲಾ ಸಮಸ್ಯೆಯಾಗಿರುವುದು ನನ್ನ ಕೊನೆ ಹೆಸರಿನಿಂದ ಎಂದು ಭಾವಿಸಿ ಐಸಿಸ್‌ ಥಾಮಸ್‌ ಎಂದು ನನ್ನ ಮೂಲ ಹೆಸರನ್ನು ಇರಿಸಿದೆ. ಬಳಿಕ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಐಸಿಸ್‌ ಉಗ್ರ ಸಂಘಟನೆ ಎಂದು ತಿಳಿಯಿತು’ ಥಾಮಸ್‌ ಹೇಳಿದ್ದಾರೆ.
-ಉದಯವಾಣಿ

Comments are closed.