ಬೆಂಗಳೂರು: ನಗರದ ಕಾಡುಗೋಡಿಯಲ್ಲಿ ಪ್ರಿಯಕರನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಯವತಿಯ ಶವ ಪತ್ತೆಯಾಗಿದೆ.
ಸುನಂದಾ(22) ಎಂಬಾಕೆ ನಿಗೂಢವಾಗಿ ಸಾವನ್ನಪ್ಪಿದ್ದು, ಶನಿವಾರ ರಾತ್ರಿ ಆಕೆಯ ಪ್ರಿಯಕರ ಸೈದ್ರಾ ಎಂಬಾತನ ಮನೆಗೆ ಆತನ ಹುಟ್ಟುಹಬ್ಬ ಆಚರಣೆಗಾಗಿ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಬಳಿಕ ಸುನಂದಾ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಕೇಳಿಕೊಂಡಿದ್ದಾಳೆ. ಆದರೆ ತಂದೆ ಮತ್ತು ಸಹೋದರ ಬರುವಷ್ಟರಲ್ಲೇ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಸುನಂದಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಗಳನ್ನು ಸೈದ್ರಾ ಕೊಲೆ ಮಾಡಿದ್ದಾನೆ, ಆತ್ಮಹತ್ಯೆಯಲ್ಲ ಎಂದು ಆರೋಪಿಸಿದ್ದಾರೆ. ಸುನಂದಾ ಮತ್ತು ಸೈದ್ರಾಗೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ.
ಘಟನೆಯ ಬಳಿಕ ಸೈದ್ರಾ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
Comments are closed.