
ಛತ್ತೀಸಗಢದ ಗರಿಯಾಬಂದ ಜಿಲ್ಲೆಯ ಗ್ರಾಮದಲ್ಲಿನ ದಟ್ಟ ಕಾಡಿನ ನಡುವೆ ಒಂದು ಬೃಹತ್ ಶಿವಲಿಂಗ ಇದೆ. ಈ ಶಿವಲಿಂಗ ಭೂತೇಶ್ವರ ಎಂಬ ಹೆಸರಿನಲ್ಲಿ ಜನಪ್ರಿಯತೆ ಪಡೆದಿದೆ. ಇದು ವಿಶ್ವದ ಅತ್ಯಂತ ಎತ್ತರವಾದ ಪ್ರಾಕೃತಿಕ ಶಿವಲಿಂಗವಾಗಿದೆ. ಆಶ್ಚರ್ಯದ ವಿಷಯ ಏನೆಂದರೆ ಈ ಶಿವಲಿಂಗ ಪ್ರತಿ ವರ್ಷ ತನ್ನಷ್ಟಕ್ಕೆ ಎತ್ತರ ಹಾಗೂ ದಪ್ಪವಾಗುತ್ತಾ ಹೋಗುತ್ತದೆ.
ಹೌದು ನೀವು ಕೇಳುತ್ತಿರುವುದು ನಿಜಾ. ಇದು ಪ್ರತಿ ವರ್ಷ ಎತ್ತರ ಎತ್ತರವಾಗಿ ಬೆಳೆಯುತ್ತಾ ಹೋಗುತ್ತದೆ. ಈ ಶಿವಲಿಂಗ ಸುಮಾರು ೧೮ ಫೀಟ್ ಎತ್ತರ ಹಾಗೂ ೨೦ ಫೀಟ್ ಗೋಲಾಕಾರದಲ್ಲಿ ಬೆಳೆದಿದೆ. ರಾಜಸ್ವ ವಿಭಾಗದ ಪ್ರಕಾರ ಈ ಶಿವಲಿಂಗ ಪ್ರತಿ ವರ್ಷ ೬ ರಿಂದ ೮ ಇಂಚು ಎತ್ತರ ಬೆಳೆಯುತ್ತಾ ಹೋಗುತ್ತದೆ.
ಈ ಲಿಂಗ ಹುಟ್ಟಿದ ಕತೆ ಹೀಗಿದೆ :
ಸುಮಾರು ವರ್ಷದ ಹಿಂದೆ ಜಮೀನ್ದಾರಿ ಪದ್ಧತಿ ಜಾರಿಯಲ್ಲಿರುವ ಸಂದರ್ಭದಲ್ಲಿ ಪಾರಾಗಾಂವ್ ನಿವಾಸಿ ಶೋಭಸಿಂಹ ಇಲ್ಲಿ ವ್ಯವಸಾಯ ಮಾಡುತ್ತಿದ್ದ. ಒಂದು ದಿನ ಆತ ಇಲ್ಲಿ ನಡೆದಾಡುತ್ತಿರುವಾಗ ಒಂದು ವಿಶೇಷ ಆಕೃತಿಯ ಕಲ್ಲು ಅಲ್ಲಿ ಕಾಣ ಸಿಗುತ್ತದೆ. ಅಲ್ಲಿಂದ ಯಾವಾಗಲೂ ಗೂಳಿ ಮತ್ತು ಹುಲಿ ಗರ್ಜಿಸುವಂತೆ ಶಬ್ಧ ಕೇಳಿ ಬರಲು ಆರಂಭಿಸಿತು. ಹಲವಾರು ಬಾರಿ ಈ ಶಬ್ಧ ಕೇಳಿದ ನಂತರ ಶೋಭಸಿಂಹ ಗ್ರಾಮವಾಸಿಗಳಿಗೆ ಈ ವಿಷಯ ತಿಳಿಸಿದ.
ಊರಿನ ಜನರಿಗೂ ಈ ಶಬ್ಧ ಕೇಳಿ ಅವರು ಹುಲಿ ಮತ್ತು ಗೂಳಿಗಾಗಿ ಅಲ್ಲಿ ಸಮೀಪದಲ್ಲೆಲ್ಲಾ ಹುಡುಕಾಟ ನಡೆಸಿದರು. ಆದರೆ ದೂರದವರೆಗೂ ಯಾವುದೇ ಪ್ರಾಣಿಗಳು ಕಂಡು ಬರಲಿಲ್ಲ. ನಂತರ ಅವರಿಗೆ ಈ ಕಲ್ಲಿನ ಮೇಲೆ ನಂಬಿಕೆ ಬರಲು ಆರಂಭವಾಯಿತು. ಅವರು ಇದನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲು ಆರಂಭಿಸಿದರು. ನಂತರ ದಿನಕಳೆದಂತೆ ಅದರ ಎತ್ತರ ಹಾಗೂ ಅಗಲ ಬೆಳೆಯುತ್ತಾ ಹೋಯಿತು. ಇದೀಗ ಈ ಶಿವಲಿಂಗ ಭೂಮಿಯಿಂದ ೧೮ ಫಿಟ್ ಎತ್ತರ ಬೆಳೆದಿದೆ.
ಈ ಸ್ಥಳ ಭೂತೇಶ್ವರನಾಥ್, ಭುಕಾರ್ ಮಹಾದೇವ್ ಎಂಬ ಹೆಸರಿನಿಂದ ಜನಪ್ರಿಯತೆ ಗಳಿಸಿದೆ. ಈ ಪೌರಾಣಿಕ ಸ್ಥಳದ ಮಹತ್ವ ೧೯೫೯ರಲ್ಲಿ ಗೋರಖ್‌ಪುರ ಪ್ರಕಾಶಿತ ಧಾರ್ಮಿಕ ಪತ್ರಿಕೆ ಕಲ್ಯಾಣದ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
Comments are closed.