ಕರ್ನಾಟಕ

ಯಶಸ್ಸಿನಿ ಹಾದಿಯಲ್ಲಿ ಮೈಸೂರಿನ ಮೊದಲ ಕ್ಯಾಬ್ ಚಾಲಕಿ

Pinterest LinkedIn Tumblr

neetha

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಅಕ್ಷರಶಃ ಆಧುನಿಕ ಮಹಿಳೆಯರಿಗೂ ಒಪ್ಪುತ್ತದೆ ಎಂದರೆ ತಪ್ಪಾಗಲಾರದು.

ಇಂದು ಮಹಿಳೆ ಶಿಕ್ಷಣ, ಸಾಮಾಜಿಕ, ರಾಜಕೀಯ, ವೈಮಾನಿಕ, ಬಾಹ್ಯಾಕಾಶ ಹೀಗೆ ಪ್ರತಿ ಕ್ಷೇತ್ರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದ್ದಾಳೆ.

ಪುರುಷ ಪ್ರಧಾನ ಸಮಾಜದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸಾಧನೆಯಲ್ಲಿ ತೊ‌ಡಗಿಸಿಕೊಂಡಿದ್ದಾಳೆ ಎಂದರೆ ಅತಿಶಯೋಕ್ತಿಯಲ್ಲ.

ಇಲ್ಲಿ ಹೇಳ ಹೊರಟಿರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ಯಾಬ್ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಹೆಬ್ಬಾಳ ನಿವಾಸಿ ನೀತಾ (35)ರವರ ಯಶೋಗಾಥೆಯನ್ನು.

ಸಾರಿಗೆ ಸಂಸ್ಥೆ ಬಸ್ ಚಾಲಕಿಯಾಗಿ, ಆಟೋ ರಿಕ್ಷಾ ಚಾಲಕಿಯಾಗಿ ಮಹಿಳೆಯರು ಗಮನ ಸೆಳೆದಿದ್ದರು. ಇದೀಗ ವೋಲಾ ಕಂಪನಿಯ ಕ್ಯಾಬ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿರುವ ನೀತಾ ಮೈಸೂರಿನ ಪ್ರಪ್ರಥಮ ಕ್ಯಾಬ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿಯ ನೀತು ಕುಂದಾಪುರ ನಿವಾಸಿ ಕೆಪಿಟಿಸಿಎಲ್ ಉದ್ಯೋಗಿ ರಾಜು ಎಂಬುವರ ಪತ್ನಿ ಮುಕ್ತ ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ.

ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಆಯ್ಕೆ. ಆದರೆ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಮನೆಯವರಿಂದಲೇ ವಿರೋಧ.

ಕೊನೆಗೆ ನೀತು ಆಯ್ಕೆ ಮಾಡಿಕೊಂಡಿದ್ದುದು ಕ್ಯಾಬ್ ಡ್ರೈವರ್ ಕೆಲಸವನ್ನು. ಮನೆಯವರನ್ನು ಮನವೊಲಿಸಿ ಕೊನೆಗೆ ಕ್ಯಾಬ್ ಮಾಲೀಕರನ್ನು ಸಂಪರ್ಕಿಸಿದಾಗ ಅವರಿಗೆ ಅಚ್ಚರಿ, ದಿಗ್ಭ್ರಮೆ.

ಮಹಿಳೆಯೊಬ್ಬರು ಡ್ರೈವರ್ ಆಗಿ ಮೈಸೂರು ಸುತ್ತುವುದೇ? ಆದರೂ ನೀತು ಆಸಕ್ತಿಗೆ ನಿರಾಸೆ ಮಾಡದೆ ಚಾಲಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.
ಮದುವೆಯಾದ ಹೊಸತರಲ್ಲೇ ಕಾರು ಚಲಾಯಿಸುವುದನ್ನು ನೀತು ಕಲಿತಿದ್ದರು. ಸ್ವಾವಲಂಬಿಯಾಗಿ ದುಡಿಯಬೇಕು ಎಂಬ ಆಸೆಗೆ ಕಾರು ಕಲಿತಿದ್ದು ನೆರವಿಗೆ ಬಂದಿತು.
ಟಾಟಾ ವಿಸ್ತಾ (ಕೆ.ಎ. 14 ಬಿ. 4761) ಕಾರು ಇದ್ದು, ಓಲಾ ಕಂಪನಿ ಮಾಲೀಕ ಪ್ರಯಾಣಿಕರನ್ನು ಸಂಪರ್ಕಿಸುತ್ತಾರೆ.

ಹೊರ ಜಿಲ್ಲೆಗಳ ಟ್ರಿಪ್ ಅನ್ನು ನೀತು ಒಪ್ಪಿಕೊಳ್ಳುವುದಿಲ್ಲ. ಚಾಮುಂಡಿಬೆಟ್ಟ, ಕೆಆರ್‌ಎಸ್, ನಂಜನಗೂಡು, ಕೆ.ಆರ್.ನಗರ, ಶ್ರೀರಂಗಪಟ್ಟಣ, ನರಸೀಪುರ, ಹುಣಸೂರು ಸೇರಿದಂತೆ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಸುರಕ್ಷಿತವಾಗಿ ಕರೆದೊಯ್ಯುತ್ತಾರೆ.

ಕಳೆದ ಒಂದು ವರ್ಷದಿಂದ ಸಾವಿರಾರು ಟ್ರಿಪ್‌ಗಳನ್ನು ಮುಗಿಸಿರುವ ನೀತು ಕಂಡರೆ ಪ್ರವಾಸಿಗರಿಗೂ ಅಚ್ಚುಮೆಚ್ಚು. ಅತ್ಯುತ್ತಮ ಸೇವೆ ಮೆಚ್ಚಿ ಪ್ರವಾಸಿಗರು ಧಾರಾಳವಾಗಿ ಟಿಪ್ಸ್ ನೀಡುತ್ತಾರೆ.

Comments are closed.