ಮನೋರಂಜನೆ

ಅಮ್ಮನಾಗಲಿದ್ದಾರೆ ಕರೀನಾ ಕಪೂರ್

Pinterest LinkedIn Tumblr

kareenaದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಗರ್ಭಿಣಿಯಾಗಿರುವುದು ಸತ್ಯ ಎಂದು ಪತಿ ಸೈಫ್ ಆಲಿ ಕಾನ್ ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಈ ಮೂಲಕ ಹಲವು ಸಮಯಗಳ ಗಾಸಿಪ್ ಗೆ ಇದೀಗ ತೆರೆಬಿದ್ದಿದೆ.

ಹೌದು ಬಾಲಿವುಡ್ ರಾಯಲ್ ದಂಪತಿಯ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಲಿದೆ. ತನ್ನ ಪತ್ನಿ ಗರ್ಭಿಣಿಯಾಗಿರುವುದು ಊಹಾಪೋಹವಲ್ಲ. ನಿಜವಾಗಿಯೂ ಈಕೆ ಗರ್ಭಿಣಿಯಾಗಿದ್ದು, ಮುಂಬರುವ ಡಿಸೆಂಬರ್ ನಲ್ಲಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಗಲಿದೆ. ಇನ್ನು ಪತ್ನಿ ಕರೀನಾ ಗರ್ಭಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಶುಭಹಾರೈಸಿದ ಎಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ ಎಂಬುವುದಾಗಿ ಪತಿ ಸೈಫ್ ಆಲಿ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Comments are closed.