ಕರಾವಳಿ

“ಯಕ್ಷತ್ರಿಕೂಟ ಸಂಭ್ರಮ‌” ಉದ್ಘಾಟನೆ

Pinterest LinkedIn Tumblr

kallukra_yaksha_gana

ಮಂಗಳೂರು,ಜುಲೈ.02 : ಕಲ್ಕೂರ ಪ್ರತಿಷ್ಠಾನದ‌ ಆಶ್ರಯದಲ್ಲಿ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ (ರಿ) ಕಲ್ಲಗದ್ದೆ ತಂಡದವರಿಂದ ನಗರದ ಡಾನ್‌ ಬಾಸ್ಕೋ ಹಾಲ್‌ನಲ್ಲಿ ಮೂರು ದಿನದ ‘ಯಕ್ಷತ್ರಿಕೂಟ ಸಂಭ್ರಮ ಕಾರ್ಯಕ್ರಮ‌ ಉದ್ಘಾಟನೆಗೊಂಡಿತು.  ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ‌ ಅಕಾಡೆಮಿಯ ಮಾಜಿ‌ ಅಧ್ಯಕ್ಷ ಕುಂಬ್ಳೆ ಸುಂದರರಾವ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ್ ಕುಮಾರ್ ಕಲ್ಕೂರ‌ ಅಧ್ಯಕ್ಷತೆ ವಹಿಸಿದ್ದರು. ಹರಿಕೃಷ್ಣ ಪುನರೂರು ಮತ್ತು ಶ್ರೀಮತಿ ಭುವನೇಶ್ವರಿ ಹೆಗಡೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೆರೆಮನೆ ಶಾರದಾ ಹೆಗಡೆ, ಜಿ.ಕೆ. ಭಟ್ ಸೇರಾಜೆ, ಎಸ್.ಎಂ. ಹೆಗಡೆ, ಜನಾರ್ದನ ಹಂದೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕೆರೆಮನೆ ಶಂಭು ಹೆಗಡೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯ್ತು. ಉದ್ಘಾಟನೆಯ ಬಳಿಕ ಕೃಷ್ಣಾರ್ಜುನ ಯಕ್ಷಗಾನ ಬಯಲಾಟ ಜರಗಿತು.

Comments are closed.