ಮನೋರಂಜನೆ

ಅನುಕರಣೆ ಅಗತ್ಯವಿಲ್ಲ: ಪ್ರಿಯಾಂಕ

Pinterest LinkedIn Tumblr

piggggg‘ಹಾಲಿವುಡ್‌ನಲ್ಲೂ ನಾನು ನಾನಾಗಿಯೇ ಇರಲು ಬಯಸುತ್ತೇನೆ. ಇಲ್ಲಿಯೂ ಯಾರನ್ನೂ ಅನುಕರಣೆ ಮಾಡುವ ಅಗತ್ಯ ನನಗಿಲ್ಲ’ ಎಂದಿದ್ದಾರೆ ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಸದ್ಯ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಛೋಪ್ರಾ.

ಹಾಲಿವುಡ್‌ನ ‘ಬೇವಾಚ್‌’ ಚಿತ್ರಕ್ಕೆ ಬಣ್ಣ ಹಚ್ಚಿರುವ ಪಿಗ್ಗಿ, ಅಮೆರಿಕನ್‌ ಬ್ರಾಡ್‌ಕಾಸ್ಟಿಂಗ್‌ ಕಂಪೆನಿ ನಿರ್ಮಿಸುತ್ತಿರುವ ‘ಕ್ವಾಂಟಿಕೊ’ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ.

‘ನಾನಿನ್ನೂ ಇಲ್ಲಿಗೆ ಹೊಸಬಳು. ಆದರೆ, ಆ ಕಾರಣಕ್ಕಾಗಿ ಇತರರನ್ನು ಅನುಕರಣೆ ಮಾಡುವ ಅಗತ್ಯವಿಲ್ಲ. ಎಲ್ಲೇ ಹೋದರೂ ನಾನು ನಾನಾಗಿಯೇ ಇರಲು ಬಯಸುತ್ತೇನೆ. ಸ್ವಂತಿಕೆ ಇಲ್ಲದ ಬೆಳವಣಿಗೆ ಒಲ್ಲೆ’ ಎಂದಿದ್ದಾರೆ ಛೋಪ್ರಾ.

‘ಜೀವನದಲ್ಲಿ ಬಂದಿದ್ದನ್ನು ಬಂದ ಹಾಗೆಯೇ ಸ್ವೀಕರಿಸುವವಳು ನಾನು. ಸದ್ಯ ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಂದೇನೋ ಗೊತ್ತಿಲ್ಲ. ಭೂತ, ಭವಿಷ್ಯದ ಬಗ್ಗೆ ಯೋಚಿಸುವುದಕ್ಕಿಂತ ವರ್ತಮಾನದ ಬದುಕು ನನಗೆ ಮುಖ್ಯ’ ಎಂದಿರುವ ಪ್ರಿಯಾಂಕ ಸದ್ಯ ಬಾಲಿವುಡ್‌ನಲ್ಲಿ ಯಾವ ಹೊಸ ಚಿತ್ರಗಳಿಗೂ ಸಹಿ ಹಾಕಿಲ್ಲವಂತೆ!

Comments are closed.