ಮನೋರಂಜನೆ

ಗ್ಲಾಮರ್ ಜಗತ್ತಿನಲ್ಲಿ ಸೋನಮ್,ರಿಯಾ ಕಪೂರ್ ಸ್ಟೈಲ್ ಐಕಾನ್‌ಗಳು: ಕಂಗನಾ

Pinterest LinkedIn Tumblr

kanganದೆಹಲಿ: ಗ್ಲಾಮರ್ ಜಗತ್ತಿನಲ್ಲಿ ಸೋನಮ್ ಹಾಗೂ ರಿಯಾ ಕಪೂರ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕಂಗನಾ ರಣಾವತ್ ಹೊಗಳಿದ್ದಾರೆ. ಗ್ಲಾಮರ್ ಜಗತ್ತಿನ ಸ್ಟೈಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ನಟಿ ಕಂಗನಾ ಬಾಲಿವುಡ್ ಇಂಡಸ್ಟ್ರಿಯಲ್ಲಿ ನಿಮ್ಮ ಸ್ಟೈಲ್ ಐಕಾನ್‌ಗಳು ಯಾರು? ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಕಂಗನಾ ಈ ಹೇಳಿಕೆ ನೀಡಿದ್ದಾರೆ.

ಈ ವೇಳೆ ಸೋನಮ್ ಕಪೂರ್ ಹಾಗೂ ರಿಯಾ ಅವರನ್ನು ಪ್ರಶಂಸೆ ವ್ಯಕ್ತಪಡಿಸಿದ ಕಂಗನಾ, ಸೋನಮ್ -ರಿಯಾ ಇಬ್ಬರು ನಿಜಕ್ಕೂ ಇನ್‌ಸ್ಪೇರ್ ಆಗಿದ್ದಾರೆ. ಗ್ಲಾಮರ್ ವರ್ಲ್ಡ್‌ ಸ್ಟೈಲ್‌ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಇಬ್ಬರ ಸ್ಟೈಲ್‌ಗೆ ನಾನು ಕ್ರೇಡಿಟ್ ನೀಡಬಯಸುವೆ ಎಂದು ತಿಳಿಸಿದರು.

ಇಂಡಸ್ಟ್ರಿಯಲ್ಲಿ ಬಹಳಷ್ಟು ಗ್ಲಾಮರ್ ಕಲಾವಿದರಿದ್ದಾರೆ. ಅವರೆಲ್ಲಾ ತುಂಬಾ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಅಮಿ ಪಟೇಲ್ ಹಾಗೂ ಅನಿತಾ ಶ್ರಾಫ್ ಕೂಡ ಒಬ್ಬರು.ಆದ್ರೆ ಇಂದಿನ ದಿನಗಳಲ್ಲಿ ಎಲ್ಲರು ಸ್ಟೈಲಿಸ್ಟ್‌ಗಳಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

Comments are closed.