ಮುಂಬೈ: ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಕ್ಯಾನ್ಸರ್ ಕಾಯಿಲೆಯಿಂದ ಹೋರಾಟದ ಬಳಿಕ ಅವರು ತೆರೆ ಮೇಲೆ ಅಮ್ಮನ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ನಟಿ ಮನೀಷಾ ಪ್ರಕಾರ ತಾಯಿನೇ ಜಗತ್ತು ಎನ್ನುವ ಅವರಿಗೆ, ಅಮ್ಮನ ಪಾತ್ರದಲ್ಲಿ ಮಿಂಚಲು ಖುಷಿ ತಂದಿದೆಯಂತೆ.
ಉತ್ತಮ ಪಾತ್ರಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದ ಅವರು, ತಾವು ನಿರೀಕ್ಷೆ ಮಾಡಿದ್ದ ರೋಲ್ ಸಿಕ್ಕಿದೆ ಎಂದು ತಿಳಿಸಿದ್ದಾರೆ.. ಹಿಂದಿ ಬೆಂಗಾಲಿ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಮನೀಷಾ, ಮುಂಬರುವ ಚಿತ್ರ ನಿರ್ದೇಶಕ ಓಂ ಪ್ರಕಾಶ ಮೆಹರಾ ಪ್ರಕಾಶ್ ಝಾ ಚಿತ್ರದಲ್ಲಿ ಮನಿಷಾ ಮಿಂಚಲಿದ್ದಾರೆ.
ಈ ಚಿತ್ರವು ಮುಖ್ಯವಾಗಿ ತಾಯಿಯ ಕುರಿತು ಬಿಂಬಿಸಲಿದೆ. ಇದೊಂದು ಬ್ಯೂಟಿಫುಲ್ ಸ್ಟೋರಿ ಎನ್ನುವ ಅವರು 20 ವರ್ಷದ ಮಗನಿಗೆ ಅಮ್ಮನಾಗಿರುವ ಪಾತ್ರದಲ್ಲಿ ಮಿಂಚುತ್ತಿರುವುದಕ್ಕೆ ಸಂತಸದಂದಿರುವ ಅವರು, ಸ್ಟ್ರಾಂಗ್ ವುಮ್ಯೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮನೀಷಾ.. 2 ವರ್ಷದ ಹಿಂದೆ ಈ ಚಿತ್ರಕ್ಕಾಗಿ ಇವರನ್ನು ಸಂಪರ್ಕ ಮಾಡಲಾಗಿತ್ತಿದೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಹಿಂಮಾಂಶು ಧನುಕಾ, ಮನಿಷಾ ಅವರನ್ನು ಭೇಟಿ ಮಾಡಿದಾಗ ಅಮ್ಮನ ಪಾತ್ರದಲ್ಲಿ ನಟಿಸಲು ಮನಿಷಾ ಯೆಸ್ ಅಂದಿದ್ದರಂತೆ. ಎಂದು ನಿರ್ಮಾಪಕ ಹಿಂಮಾಂಶು ತಿಳಿಸಿದ್ದಾರೆ.
Comments are closed.